ಹಾವು ಮೈಮೇಲೆ ಬಿಟ್ಟು ಹಾಡು ಹಾಡುತ್ತಿದ್ದ ಗಾಯಕಿ: ಕೆನ್ನೆಗೆ ಕಚ್ಚಿ ಗಾಯಕಿಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ಉರಗ
Monday, December 27, 2021
ವಾಷಿಂಗ್ಟನ್: ಹಾವೊಂದನ್ನು ಹಿಡಿದುಕೊಂಡು ಆಲ್ಬಂ ಹಾಡು ಹೇಳುವ ಸಾಹಸ ಮಾಡುತ್ತಿದ್ದ ಗಾಯಕಿಯೊಬ್ಬಳಿಗೆ ಹಾವು ಕಚ್ಚಿರುವ ಘಟನೆ ನಡೆದಿದೆ.
ಅಮೆರಿಕಾದ ಗಾಯಕಿ ಮೇಟಾ ಅವರು ಆಲ್ಬಂವೊಂದರ ಚಿತ್ರೀಕರಣ ನಡೆಸುತ್ತಿದ್ದ ಸಂದರ್ಭ ಈ ಹಾವು ಕಚ್ಚಿದೆ. ಹಾವು ಕಚ್ಚುತ್ತಿದ್ದಂತೆ ಆಕೆ ಭಯದಿಂದ ಚೀರಿದ್ದಾಳೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.
21 ವರ್ಷದ ಗಾಯಕಿ ಮೇಟಾ ಮೈಮೇಲೆ ಹಾವನ್ನು ಹಾಕಿಕೊಂಡು ವಿಭಿನ್ನವಾಗಿ ಚಿತ್ರೀಕರಣ ಮಾಡಲು ಯೋಜನೆ ಹಾಕಿಕೊಂಡಿದ್ದಳು. ಹೀಗೆ ಆಕೆ ಹಾವನ್ನು ಮೈಮೇಲೆ ಹಾಕಿ ಹಾಡು ಹೇಳುತ್ತಿದ್ದ ವೇಳೆ, ಆಕೆಯ ಸಹಾಯಕ ಇನ್ನೊಂದು ಹಾವನ್ನು ಕೊಡಲು ಹೋಗಿದ್ದಾನೆ. ಆಗ ಆಕೆ ಕೈಯಲ್ಲಿ ಹಿಡಿದುಕೊಂಡಿದ್ದ ಹಾವು ಮೇಟಾ ಮುಖಕ್ಕೆ ಕಚ್ಚಿದೆ.
ವೀಡಿಯೋದಲ್ಲಿ ಇದನ್ನು ನೋಡಿದಾಗ ಹಾವು ಆಕೆಯ ಕೆನ್ನೆಗೆ ಮುತ್ತಿಟ್ಟಂತೆ ಕಾಣಿಸುತ್ತಿದೆ. ಏಕಾಏಕಿ ಹಾವು ಕಚ್ಚಿರೋದರಿಂದ ಗಾಯಕಿ ಥಟ್ಟನೆ ಚೀರಿಕೊಂಡಿದ್ದಾಳೆ. ಆದರೆ ಈ ಹಾವು ವಿಷಪೂರಿತವಲ್ಲವಾದ್ದರಿಂದ ಅವಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟೀನ್ ಸೀನ್, ಟಾಕ್ಸಿಕ್ ಮತ್ತು ಹ್ಯಾಬಿಟ್ಸ್ ನಂತಹ ಹಾಡುಗಳನ್ನು ಒಳಗೊಂಡಿರುವ ತಮ್ಮ ಚೊಚ್ಚಲ ಆಲ್ಬಂ ‘ಹ್ಯಾಬಿಟ್ಸ್’ನಿಂದ ಭಾರಿ ಜನಪ್ರಿಯತೆ ಗಳಿಸಿರುವ ಗಾಯಕಿ ಮೇಟಾ ಏನೇನೋ ಸಾಹಸ ಮಾಡಿದ್ದಳು. ಆದರೆ ಆಕೆಗೆ ಮೊದಲ ಬಾರಿಗೆ ಇಂಥಹ ಅನಾಹುತವೊಂದು ಆಗಿದೆ. ಐದು ಸೆಕೆಂಡ್‌ಗಳ ವಿಡಿಯೋವನ್ನು ಖುದ್ದು ಮೇಟಾ ‘ಎಂದಿಗೂ ಹೀಗೆ ಆಗಿಲ್ಲ’ ಎಂದು ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.