
ಮನೆ ಬಿಟ್ಟು ತವರು ಮನೆಗೆ ಹೋಗಿರುವ ಪತ್ನಿ ವಾಪಸ್ ಆಗಿಲ್ಲವೆಂದು ಪತಿ ಆತ್ಮಹತ್ಯೆ
Tuesday, December 14, 2021
ಬೆಂಗಳೂರು: ಮನಸ್ತಾಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಪತ್ನಿಯು ವಾಪಸ್ ಬರಲು ಹೇಳಿದರೂ ಮರಳದಿದ್ದರಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಇಟ್ಟಮಡುವಿನ ಮಾರುತಿ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಇಟ್ಟಮಡುವಿನ ಮಾರುತಿ ನಗರ ನಿವಾಸಿ ನವೀನ್ ಕುಮಾರ್ (33) ಎಂಬಾತ ಆತ್ಮಹತ್ಯೆ.
ನವೀನ್ ಆರು ವರ್ಷಗಳ ಹಿಂದೆ ಚೈತ್ರಾ ಎಂಬಾಕೆಯನ್ನು ವಿವಾಹವಾಗಿದ್ದ. ವೈವಾಹಿಕ ಜೀವನದಲ್ಲಿ ಅನ್ಯೋನ್ಯವಾಗಿದ್ದ ಈ ದಂಪತಿ ಮಧ್ಯೆ ಇತ್ತೀಚೆಗೆ ಭಿನ್ನಾಭಿಪ್ರಾಯ ಮೂಡಿತ್ತು.
ಇದರಿಂದ ಇಬ್ಬರ ನಡುವೆ ಮನಸ್ತಾಪ ಮೂಡಿ ಜಗಳ ನಡೆದಿತ್ತು. ಇದೇ ಗಲಾಟೆಯಿಂದ ಬೇಸರಗೊಂಡ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಪತ್ನಿಗೆ ಮನೆಗೆ ಮರಳುವಂತೆ ಕೋರಿದ್ದರೂ ಆಕೆ ಬರಲಿಲ್ಲ. ಪತ್ನಿಗೆ ಕರೆ ಮಾಡಿ ಮನೆಗೆ ವಾಪಸ್ ಬರುವಂತೆ ಕೇಳಿಕೊಂಡರೂ ಆಕೆ ಬಂದಿರಲಿಲ್ಲ. ಇದರಿಂದ ತೀವ್ರವಾಗಿ ಮನನೊಂದ ನವೀನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.