
ತಂದೆಯ ಸಾವು ಭರಿಸಲಾಗದೆ ಮಗಳು ನದಿಗೆ ಹಾರಿ ಆತ್ಮಹತ್ಯೆ
Thursday, December 16, 2021
ಚಿಕ್ಕಮಗಳೂರು: ತೀರಾ ಹತ್ತಿರ ಸಂಬಂಧಿಗಳನ್ನು ಕಳೆದುಕೊಂಡರೆ, ಸಹಿದಲಾಗದ ನೋವು ಎಲ್ಲರನ್ನೂ ಬಾಧಿಸುತ್ತದೆ. ಈ ನೋವು ಶಮನವಾಗಲು ಕೆಲವರಿಗೆ ಸಾಕಷ್ಟು ಕಾಲಗಳೇ ಬೇಕಾಗುತ್ತದೆ. ಆದರೆ ಇಲ್ಲೊಬ್ಬಳು ಪುತ್ರಿ ತಂದೆಯ ಸಾವಿನ ನೋವನ್ನು ಭರಿಸಲಾಗದೆ ನದಿಗೆ ಹಾರಿ ಮೃತಪಟ್ಟ ಘಟನೆ ನಡೆದಿದೆ.
ಈ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನಲ್ಲಿ ನಡೆದಿದೆ. ಬಾಳೆಕೊಪ್ಪ ಗ್ರಾಮದ ನಿವಾಸಿ, ಎನ್. ಆರ್. ಪುರದಲ್ಲಿ ಪದವಿ ವಿದ್ಯಾರ್ಥಿನಿಯಾಗಿದ್ದ ಸ್ಪಂದನಾ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಕಳೆದ ಮೂರು ತಿಂಗಳ ಹಿಂದೆ ಈಕೆಯ ತಂದೆ ಮೃತಪಟ್ಟಿದ್ದರು. ಇದರಿಂದ ಮನನೊಂದಿದ್ದ ಸ್ಪಂದನ ಮೆಣಸೂರು ಗ್ರಾಮದ ಭದ್ರಾ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಎನ್. ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.