-->
ಮಾಜಿ ಪ್ರಿಯಕರನೊಂದಿಗೆ ಲಾಡ್ಜ್ ಗೆ ಹೋದ ವಿಚ್ಛೇದಿತ ಯುವತಿ ನೇಣಿಗೆ ಶರಣು: ಇಬ್ಬರೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ ಬಯಲು

ಮಾಜಿ ಪ್ರಿಯಕರನೊಂದಿಗೆ ಲಾಡ್ಜ್ ಗೆ ಹೋದ ವಿಚ್ಛೇದಿತ ಯುವತಿ ನೇಣಿಗೆ ಶರಣು: ಇಬ್ಬರೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ ಬಯಲು

ಬಾಗೇಪಲ್ಲಿ: ವಿಚ್ಛೇದಿತ ಯುವತಿಯೋರ್ವಳು ಮಾಜಿ ಪ್ರಿಯಕರನೊಂದಿಗೆ ಲಾಡ್ಜ್​ಗೆ ತೆರಳಿ ಅಲ್ಲಿಯೇ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಸಾವಿಗೂ ಮುನ್ನ ಆಕೆ ಬರೆದಿಟ್ಟ ಡೆತ್​ನೋಟ್​ನಲ್ಲಿ ಇಬ್ಬರು ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಉಲ್ಲೇಖಿಸಿದ್ದಾಳೆ. ​ 

ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ ವೀಣಾ(26) ಮೃತ ಮಹಿಳೆ. 

ಮುಳಬಾಗಿಲಿನ ಮುರಳಿ ಎಂಬಾತನೊಂದಿಗೆ ವೀಣಾಗೆ 8 ವರ್ಷಗಳ ಹಿಂದೆ ಮದುವೆಯಾವಾಗಿತ್ತು. ಆದರೆ ಸಂಸಾರ ಸರಿಹೋಗದೆ ಕೆಲ ದಿನಗಳ ಹಿಂದೆ ವೀಣಾ, ಆತನೊಂದಿಗೆ ವಿಚ್ಚೇದನ ಪಡೆದಿದ್ದಳು. 
ಆ ಬಳಿಕ ಆಕೆ ಮಾಜಿ ಪ್ರಿಯಕರ ಮುಳಬಾಗಿಲಿನ ಪುನೀತ್​​ ಮತ್ತು ಲಕ್ಷ್ಮೀಕಾಂತ್​ ಎಂಬುವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. 

ಮಾಜಿ ಪ್ರಿಯಕರ ಪುನೀತ್​ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್​​ನಲ್ಲಿ ವೀಣಾ ಉಳಿದುಕೊಂಡಿದ್ದಳು. ಆದರೆ ಶುಕ್ರವಾರ ಅದೇನಾಯ್ತೋ ಗೊತ್ತಿಲ್ಲ, ಲಾಡ್ಜ್​ನ ಕೋಣೆಯಲ್ಲೇ ವೀಣಾಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರ ಜೊತೆಗೆ ಅನೈತಿಕ ಸಂಬಂಧ ಹೊಂದಿರುವುದು ಕುಟುಂಬ ಸದಸ್ಯರಿಗೆ ತಿಳಿದಿದೆ ಎಂದು ಮರ್ಯಾದೆಗೆ ಅಂಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿ ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. 

ಈ ಬಗ್ಗೆ ಬಾಗೇಪಲ್ಲಿ ಪೊಲೀಸ್​ ವೃತ್ತ ನಿರೀಕ್ಷಕ ಡಿ.ಆರ್​.ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ವೀಣಾಳ ಪ್ರಿಯಕರ ಪುನೀತ್​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article