ಮಂಗಳೂರು: ನೇಣಿಗೆ ಕೊರಳೊಡ್ಡಿದ ಎಂಬಿಬಿಎಸ್ ವಿದ್ಯಾರ್ಥಿನಿ !
Sunday, December 19, 2021
ಮಂಗಳೂರು: ನಗರದ ದೇರಳಕಟ್ಟೆಯ ಕಾಲೇಜೊಂದರ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ನೇಣಿಗೆ ಕೊರಳೊಡ್ಡಿ ಮೃತಪಟ್ಟ ಘಟನೆ ಇಂದು ನಡೆದಿದೆ.
ನಗರದ ಕಣಚೂರು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ವಿದ್ಯಾರ್ಥಿನಿ ವೈಶಾಲಿ ಗಾಯಕ್ ವಾಡ್(25) ಮೃತಪಟ್ಟ ದುರ್ದೈವಿ.
ವೈಶಾಲಿ ಬೀದರ್ ಜಿಲ್ಲೆಯ ಆನಂದನಗರ ನಿವಾಸಿಯಾಗಿದ್ದಾರೆ. ಇಂದು ತಾನು ವಾಸವಾಗಿರುವ ನಗರದ ಕುತ್ತಾರಿನ ಮಲ್ಲೂರಿನಲ್ಲಿರುವ ಸಿಲಿಕಾನಿಯಾ ಅಪಾರ್ಟ್‌ಮೆಂಟ್ ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಶಾಲಿ ಗಾಯಕ್ ವಾಡ್ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.