ಮಂಗಳೂರು: ಎಂಬಿಬಿಎಸ್ ಇಂಟರ್ಶಿಪ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಇದೇ ಕಾರಣ?
Monday, December 20, 2021
ಮಂಗಳೂರು: ನಗರದ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಇಂಟರ್ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ವೈಶಾಲಿ ಗಾಯಕ್ ವಾಡ್(25) ಆತ್ಮಹತ್ಯೆಗೆ ಪ್ರೇಮಿಯೊಂದಿಗಿನ ವಿರಸವೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಆನಂದ ನಗರ ಮೂಲದ ವೈಶಾಲಿ ಗಾಯಕ್ ವಾಡ್ ನಗರದ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಇಂಟರ್ಶಿಪ್ ಮಾಡುತ್ತಿದ್ದರು. ಆದರೆ ನಿನ್ನೆ ಆಕೆ ಕುತ್ತಾರುವಿನ ಮಲ್ಲೂರು ಸಿಲಿಕಾನಿಯಾ ಅಪಾರ್ಟ್‌ಮೆಂಟ್ ನ ತನ್ನ ಪ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆಕೆಯ ಆತ್ಮಹತ್ಯೆಗೆ ಪ್ರೇಮಿಯೊಂದಿಗಿನ ವಿರಸವೇ ಕಾರಣವೆಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ವೈಶಾಲಿ ಗಾಯಕ್ ವಾಡ್ ಹಾಗೂ ಆಕೆಯ ಸಹಪಾಠಿ ಕೇರಳ ರಾಜ್ಯದ ಪಾಲಕ್ಕಾಡ್ ಸುಜೀಶ್(24) ನಡುವೆ ಪ್ರೀತಿಯಿತ್ತು. ಆತನೂ ಆಕೆಯಿರುವ ಅಪಾರ್ಟ್‌ಮೆಂಟ್ ನ ಮತ್ತೊಂದು ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ. ಆದರೆ ಇವರಿಬ್ಬರ ನಡುವಿನ ವಿರಸವೇ ವೈಶಾಲಿ ಗಾಯಕ್ ವಾಡ್ ಆತ್ಮಹತ್ಯೆಗೆ ಕಾರಣವೆಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಇದೀಗ ಉಳ್ಳಾಲ ಪೊಲೀಸರು ಸುಜೀಶ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.