![ಮಂಗಳೂರು: ನೇಣಿಗೆ ಶರಣಾದಳು ಯುವತಿ: ಪ್ರೇಮ ವೈಫಲ್ಯ ಕಾರಣವೇ? ಮಂಗಳೂರು: ನೇಣಿಗೆ ಶರಣಾದಳು ಯುವತಿ: ಪ್ರೇಮ ವೈಫಲ್ಯ ಕಾರಣವೇ?](https://blogger.googleusercontent.com/img/b/R29vZ2xl/AVvXsEhYj9Yi9B7FK5POPRF6x-WSAJSVGV8UDWbIHfsiexXcuil9LqO5AsrKecsg3gaKRXHqgS8O11-lnH1HEHPEoJvzZX7SkHX9hekSfiYbN7J2Rc-iGpKO79WnI1FNHPMz_ePXxVFQHNpgd7_e/s1600/1638588922686116-0.png)
ಮಂಗಳೂರು: ನೇಣಿಗೆ ಶರಣಾದಳು ಯುವತಿ: ಪ್ರೇಮ ವೈಫಲ್ಯ ಕಾರಣವೇ?
Saturday, December 4, 2021
ಆಕಾಶಭವನದ ಕಾಪಿಗುಡ್ಡೆ ಎಂಬ ಪ್ರದೇಶದ ನಿವಾಸಿ ಶಿಫಾಲಿ(22) ಮೃತ ದುರ್ದೈವಿ.
ಆಕಾಶಭವನದಲ್ಲಿ ಬ್ಯೂಟಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿಫಾಲಿ ಆರಾಮವಾಗಿಯೇ ಕೆಲಸಕ್ಕೆ ಹೋಗಿದ್ದಾಳೆ. ಅಲ್ಲಿಯೂ ಕೆಲಸ ಪೂರೈಸಿ ಎಂದಿನಂತೆ ಮನೆಗೆ ಮರಳಿದ್ದಾರೆ. ಆದರೆ ಅದೇನಾಯ್ತೋ ಗೊತ್ತಿಲ್ಲ, ಮನೆಗೆ ಬಂದವಳೇ ಕೋಣೆಯ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯವರು ನೋಡುವಷ್ಟರಲ್ಲಿ ಆಕೆಯ ಮೃತದೇಹವಾಗಿ ಪತ್ತೆಯಾಗಿದ್ದಾಳೆ.
ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.