
ತೆಲುಗು ನಟಿ ದಿವಿ - ವಸಿಷ್ಟ ಸಿಂಹ ಲಿಪ್ ಲಾಕ್, ಬೋಲ್ಡ್ ವೀಡಿಯೋ ವೈರಲ್
Thursday, December 9, 2021
ಹೈದರಾಬಾದ್: ನಟ ವಸಿಷ್ಠ ಸಿಂಹ ಅಭಿನಯಸಿರುವ ತೆಲುಗು ಸಿನಿಮಾ “ನಯೀಮ್ ಡೈರೀಸ್” ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಇದೀಗ ಸಿನಿನಾದ ಹಾಡೊಂದು ಬಿಡುಗಡೆಯಾಗಿದೆ.
"ನಯೀಮ್ ಡೈರೀಸ್" ಒಮ್ಉ ಥ್ರಿಲ್ಲರ್ ಸಿನಿಮಾಗಿದ್ದು, ಸಿನಿಮಾದಲ್ಲಿ ವಸಿಷ್ಠ ಸಿಂಹರೊಂದಿಗೆ ತೆಲುಗು ಬಿಗ್ಬಾಸ್ ಸೀಸನ್- 4ರ ಸ್ಪರ್ಧಿ ದಿವಿ ವಡ್ತ್ಯಾ ತೆರೆ ಹಂಚಿಕೊಂಡಿದ್ದಾರೆ. ಇದೀಗ ರಿಲೀಸ್ ಆಗಿರುವ ವಿಡಿಯೋದಲ್ಲಿ ವಸಿಷ್ಠ ಸಿಂಹ ಹಾಗೂ ನಟಿ ದಿವಿ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಹಾಡಿನಲ್ಲಿ ಬೆಡ್ರೂಮ್ ಹಾಗೂ ಲಿಪ್ಲಾಕ್ ದೃಶ್ಯಗಳ ತುಣುಕುಗಳಿವೆ. ಇಡೀ ಹಾಡು ರೊಮ್ಯಾಂಟಿಕ್ ದೃಶ್ಯಗಳಿಂದ ತುಂಬಿದ್ದು, ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ನು ಈ ಸಿನಿಮಾದಲ್ಲಿ ಕನ್ನಡತಿ ಸಂಯುಕ್ತ ಹೊರನಾಡು ಮತ್ತು ಯಜ್ಞಾ ಶೆಟ್ಟಿ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ವರದರಾಜ್ ಎಂಬುವರು ಬಂಡವಾಳ ಹೂಡಿದ್ದಾರೆ. ದಿವಿ ವಡ್ತ್ಯಾ ಬಿಗ್ಬಾಸ್ ಮನೆಗೆ ಕಾಲಿಡುವ ಮುನ್ನವೇ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿಯೊಬ್ಬರ ವೈಯಕ್ತಿಕ ಆಟಗಳ ಬಗ್ಗೆ ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಬಿಗ್ಬಾಸ್ನಲ್ಲಿ ಎಲ್ಲರ ಗಮನವನ್ನು ಅವರು ಸೆಳೆದಿದ್ದರು. ಬಿಗ್ ಬಾಸ್ ನಲ್ಲಿ ದಿವಿ ತಮ್ಮ ಸಹ ಸ್ಪರ್ಧಿಗಳಾದ ಗಂಗವ್ವ, ಅಮ್ಮ ರಾಜಶೇಖರ್ ಮತ್ತು ಇತರರಿಗೆ ಭಾರೀ ಹತ್ತಿರವಾಗಿದ್ದರು.