ಮದುವೆಯಾಗಿ ತಿಂಗಳು ಕಳೆದಿಲ್ಲ, ಸಾರಾ ಅಲಿ ಖಾನ್ ರೊಂದಿಗೆ ವಿಕ್ಕಿ ಕೌಶಲ್ ಬೈಕ್ ರೈಡಿಂಗ್: ಫೋಟೋ, ವೀಡಿಯೋ ವೈರಲ್
Thursday, December 30, 2021
ಮುಂಬೈ: ನಟ ವಿಕ್ಕಿ ಕೌಶಲ್ ಇತ್ತೀಚೆಗೆ ತಾನೇ ಬಾಲಿವುಡ್‌ನ ಹಾಟ್ ನಟಿ ಕತ್ರಿನಾ ಕೈಫ್ ಮದುವೆಯಾಗಿದ್ದಾರೆ. ಆದರೆ ಇದೀಗ ನಟ ವಿಕ್ಕಿ ಕೌಶಲ್ ಅವರು ನಟಿ ಸಾರಾ ಅಲಿ ಖಾನ್ ರೊಂದಿಗೆ ಬೈಕ್ ನಲ್ಲಿ ಬೀದಿ ಬೀದಿ ಸುತ್ತಾಡೋ, ಫೋಟೋವೊಂದು ವೈರಲ್ ಆಗುತ್ತಿದೆ.
ಇದೇನಿದು ಸದ್ಯ ಅವರ ಸಂಸಾರ ಕೆ.ಎಸ್.ನರಸಿಂಹ ಸ್ವಾಮಿಯವರ 'ಮದುವೆಯಾಗಿ ತಿಂಗಳಿಲ್ಲ, ನೋಡಿರಣ್ಣ ಹೇಗಿದೆ?, ನಾನು ಕೂಗಿದಾಗಲೆಲ್ಲಾ ಬರುವಳೆನ್ನ ಶಾರದೆ' ಎಂಬ ಕವನದಂತಿರಬಹುದು ಎಂದು ಅಂದುಕೊಂಡಿದ್ದರೆ, ಇದೇನಿದು ಹೀಗಾಗಿದೆ ಎಂದು ಎಲ್ಲರೂ ಹುಬ್ಬು ಗಂಟಿಕ್ಕಬಹುದು. ಆದರೆ ವಿಷಯ ಬೇರೆಯೇ ಇದೆ.
ಸದ್ಯ ವಿಕ್ಕಿ ಕೌಶಲ್ ಮಧ್ಯಪ್ರದೇಶದಲ್ಲಿ ತಮ್ಮ ಮುಂಬರುವ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ, ಚಿತ್ರದ ಶೂಟಿಂಗ್ ನಿಮಿತ್ತ ಇಂದೋರ್‌ನಲ್ಲಿರುವ ಅವರು, ಹಲವು ಪ್ರಮುಖ ಬೀದಿಗಳಲ್ಲಿ ಬೈಕ್ ಗಳಲ್ಲಿ ಓಡಾಡುತ್ತಿರುವ ಫೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಬೈಕ್ ನಲ್ಲಿ ವಿಕ್ಕಿಯನ್ನು ತಬ್ಬಿಕೊಂಡು ನಟಿ ಸಾರಾ ಅಲಿ ಖಾನ್ ತಬ್ಬಿಕೊಂಡು ಪಿಲಿಯನ್ ರೈಡ್ ಮಾಡುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.
ಇನ್‌ಸ್ಟಾಗ್ರಾಂನಲ್ಲಿ ಹಲವರು ಹಂಚಿಕೊಂಡ ಪೋಸ್ಟ್‌ನಲ್ಲಿ ನಟಿ ಸಾರಾ ಅಲಿ ಖಾನ್ ಹೂವಿನ ಮುದ್ರಣ ಇರುವ ಹಳದಿ ಸೀರೆ ಉಟ್ಟಿದ್ದಾರೆ . ವಿಕ್ಕಿ ಕೌಶಲ್ ಜೀನ್ಸ್ ಮತ್ತು ಮೆರೂನ್ ಹಾಫ್ ಜಾಕೆಟ್ ಜೊತೆಗೆ ಟೀ ಶರ್ಟ್ ಧರಿಸಿದ್ದಾರೆ. ಈ ಬೈಕ್ ರೈಡಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾಕ್ಕಾಗಿ ವಿಕ್ಕಿ ಹಾಗೂ ಸಾರಾ ಒಟ್ಟಿಗೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.
ಇದೇ ಮೊದಲ ಬಾರಿ ಸಾರಾ ಮತ್ತು ವಿಕ್ಕಿ ಒಟ್ಟಿಗೆ ನಟಿಸುತ್ತಿರುವುದು. ಈ ಬೈಕ್ ರೈಡಿಂಗ್ ಕೂಡ ಇದೇ ಸಿನಿಮಾದ ದೃಶ್ಯಗಳ ಶೂಟಿಂಗ್‌ನ ಅಂಗವಾಗಿದೆ. ಜನನಿಬಿಡ ಪ್ರದೇಶದಲ್ಲಿ ಈ ಶೂಟಿಂಗ್ ನಡೆದಿದ್ದು, ಸಾರ್ವಜನಿಕರು ಒಂದಿಷ್ಟು ವೀಡಿಯೋಗಳು ಮತ್ತು ಫೋಟೋಗಳು ತೆಗೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ .