ಮಧ್ಯರಾತ್ರಿ ಹೊಟೇಲ್ ನಲ್ಲಿ ಡಿನ್ನರ್ ಡೇಟ್ ಮಾಡಿಕೊಂಡು ಜೊತೆಯಾಗಿ ಕಾಣಿಸಿಕೊಂಡ ರಶ್ಮಿಕಾ - ವಿಜಯ್ ದೇವರಕೊಂಡ : ಜೋಡಿಯ ವೀಡಿಯೋ ವೈರಲ್
Tuesday, December 21, 2021
ಮುಂಬೈ: ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ರವಿವಾರ ಮಧ್ಯರಾತ್ರಿ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಪ್ರೀತಿಸುತ್ತಿದ್ದಾರೆಂಬ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.
ಕಳೆದ ಎರಡು - ಮೂರು ವರ್ಷಗಳಿಂದಲೇ ಈ ಬಗ್ಗೆ ಗುಸುಗುಸು ಕೇಳಿಬರುತ್ತಲೇ ಇದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಇಬ್ಬರೂ ನೀಡಿರಲಿಲ್ಲ. ಆದ್ದರಿಂದಲೇ, ಈ ಜೋಡಿ ಆಗಾಗ ಜೊತೆಯಾಗಿ ಕಾಣಿಸಿಕೊಂಡ ಸಂದರ್ಭ ಮಾದ್ಯಮದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ.
ರಶ್ಮಿಕಾ ಮಂದಣ್ಣ ಸದ್ಯ ಮುಂಬೈನಲ್ಲಿ ನೆಲೆಸಿದ್ದು, ವಿಜಯ್ ಕೂಡಾ ತಮ್ಮ 'ಲೈಗರ್' ಸಿನಿಮಾ ಶೂಟಿಂಗ್‌ಗೆಂದು ಮುಂಬೈನಲ್ಲೇ ಇದ್ದಾರೆ. ಡಿ.19 ರಂದು ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಡಿನ್ನರ್ ಡೇಟ್ ಎಂಜಾಯ್ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಹೋಟೆಲ್ ನಿಂದ ಇಬ್ಬರೂ ಒಟ್ಟಿಗೆ ಡಿನ್ನರ್ ಹೊರಗೆ ಬರುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿರುವ ತಕ್ಷಣ, ತಾರಾ ಜೋಡಿ ತಮ್ಮ ಸಂಬಂಧವನ್ನು ಅಧಿಕೃತ ಮಾಡಲು ಹೊರಟಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ .
ಈ ಹಿಂದೆಯೂ ಈ ಜೋಡಿ , ಮುಂಬೈನ ಹಲವು ಜಾಗಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಜಿಮ್, ಹೊಟೇಲ್ ಎಂದು ಕೈ ಕೈ ಹಿಡಿದುಕೊಂಡು ಒಟ್ಟಿಗೆ ಒಡಾಡಿದ್ದಾರೆ. ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ ಶೂಟಿಂಗ್‌ಗೆಂದು ಅಮೆರಿಕಾಕ್ಕೆ ಹೋದ ಸಂದರ್ಭದಲ್ಲಿ, ರಶ್ಮಿಕಾ ಅಲ್ಲಿಗೆ ಹೋಗಿ ನಟನನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿ ಹರಿದಾಡುತ್ತಿದೆ.