-->
ಇನ್ನು ಮುಂದೆ ವಾಟ್ಸ್ಆ್ಯಪ್ ಅಡ್ಮಿನ್ ಗಳು ನಿರಾಳ: ಗ್ರೂಪ್ ಸದಸ್ಯರ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ನೀಡಿದ ಮದ್ರಾಸ್ ಹೈಕೋರ್ಟ್

ಇನ್ನು ಮುಂದೆ ವಾಟ್ಸ್ಆ್ಯಪ್ ಅಡ್ಮಿನ್ ಗಳು ನಿರಾಳ: ಗ್ರೂಪ್ ಸದಸ್ಯರ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ನೀಡಿದ ಮದ್ರಾಸ್ ಹೈಕೋರ್ಟ್

ನವದೆಹಲಿ: ವಾಟ್ಸ್​ಆ್ಯಪ್​ ಗ್ರೂಪ್​ ಅಡ್ಮಿನ್​ಗಳು ಗ್ರೂಪ್ ಸದಸ್ಯರ ಅಸಂಬದ್ಧ ಮಾತುಗಳು, ಕಮೆಂಟ್ಸ್ ಗಳಿಂದ ತಪ್ಪಿಸಿಕೊಳ್ಳಲು ‘ಅಡ್ಮಿನ್​ ಓನ್ಲಿ’ ಎಂಬ ಆಪ್ಷನ್​ ಆ್ಯಕ್ಟಿವೇಟ್ ಮಾಡಿಟ್ಟುಕೊಂಡಿರುತ್ತಾರೆ. ಯಾಕೆಂದರೆ ಗ್ರೂಪ್​ ಸದಸ್ಯರಲ್ಲಿ ಯಾರಾದರೂ ಆಕ್ಷೇಪಾರ್ಹ ಪೋಸ್ಟ್ ಮಾಡಿ ಪ್ರಕರಣ ದಾಖಲಾದಲ್ಲಿ ಅಡ್ಮಿನ್​ ಮೇಲೂ ಕ್ರಮಕೈಗೊಳ್ಳಲಾಗುತ್ತದೆ ಎಂಬ ಭಯವೇ ಇದಕ್ಕೆ ಕಾರಣ. 

ಆದರೆ ಇದೀಗ ವಾಟ್ಸ್​ಆ್ಯಪ್​ ಅಡ್ಮಿನ್​​ಗಳು ಆ ರೀತಿ ಮಾಡಿಕೊಳ್ಳುವ ಅನಿವಾರ್ಯತೆಯೇ ಇಲ್ಲ. ಈ ಬಗ್ಗೆ ಈಗಾಗಲೇ ಇರುವ 'ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ವಾಟ್ಸ್​ಆ್ಯಪ್​ ಅಡ್ಮಿನ್ ಹೊಣೆಗಾರರಲ್ಲ' ಎಂಬ ಮಹತ್ವದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಪುನರುಚ್ಚರಿಸಿದೆ. ಈ ನಿಟ್ಟಿನಲ್ಲಿ ವಾಟ್ಸ್​ಆ್ಯಪ್​ ಅಡ್ಮಿನ್​ಗಳು ಇದರಿಂದ ನಿರಾಳರಾಗುವುದಂತೂ ಖಚಿತ. ಬಾಂಬೆ ಹೈಕೋರ್ಟ್​ ಈ ಹಿಂದೆ ನೀಡಿರುವ ಆದೇಶವೊಂದನ್ನು ಉಲ್ಲೇಖಿಸುವ ಮೂಲಕ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಆ ಆದೇಶವನ್ನು ಪುನರುಚ್ಚರಿಸಿದ್ದಾರೆ. 

ಬಾಂಬೆ ಹೈಕೋರ್ಟ್​​ ವಿ.ಕಿಶೋರ್ ಹಾಗೂ ಮಹಾರಾಷ್ಟ್ರ ರಾಜ್ಯದ ನಡುವೆಯಿದ್ದ ಪ್ರಕರಣವೊಂದರಲ್ಲಿ ಆಕ್ಷೇಪಾರ್ಹ ಪೋಸ್ಟ್​ಗೆ ಸಂಬಂಧಿಸಿದ ಆರೋಪಿಗಳ ಪಟ್ಟಿಯಿಂದ ವಾಟ್ಸ್​ಆ್ಯಪ್ ಅಡ್ಮಿನ್ ಹೆಸರನ್ನು ತೆಗೆದುಹಾಕಬೇಕು ಎಂದು ಆದೇಶಿಸಿತ್ತು. ಅಡ್ಮಿನ್ ಆದ ಮಾತ್ರಕ್ಕೆ ಆ ವ್ಯಕ್ತಿಯನ್ನೂ ಹೊಣೆಗಾರನನ್ನಾಗಿ ಮಾಡಿ ಆರೋಪಿಯ ಸ್ಥಾನದಲ್ಲಿ ಇರಿಸಲಾಗದು. ಆದರೆ ಅಡ್ಮಿನ್​ ಜವಾಬ್ದಾರಿಯ ಹೊರತಾಗಿಯೂ ಆತ ಅಥವಾ ಆಕೆ ಆಕ್ಷೇಪಾರ್ಹ ಪೋಸ್ಟ್​ ವಿಚಾರದಲ್ಲಿ ಪಾಲ್ಗೊಂಡಿದ್ದರೆ ಮಾತ್ರ ಆಗ ಆರೋಪಿಯನ್ನಾಗಿಸಬಹುದು ಎಂದಿದೆ. 

ಅಡ್ಮಿನ್ ಪಾತ್ರ ಅಡ್ಮಿನ್​ ಅಷ್ಟೇ ಆಗಿದ್ದಲ್ಲಿ, ವಿವಾದಿತ ಅಥವಾ ಆಕ್ಷೇಪಾರ್ಹ ಬರಹದಲ್ಲಿ ಅಡ್ಮಿನ್​ ಬೇರೆ ಯಾವುದೇ ರೀತಿಯಲ್ಲಿ ತೊಡಗಿಕೊಂಡಿರದಿದ್ದರೆ ಅಡ್ಮಿನ್​ ಹೆಸರನ್ನು ದೋಷಾರೋಪ ಪಟ್ಟಿಯಿಂದ ತೆಗೆದುಹಾಕಬಹುದು ಎಂದು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಆದೇಶ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article