
ಸಮಂತಾ ಬ್ಯಾಕ್ ಲೆಸ್ ಫೋಟೊಗೆ 1 ಮಿಲಿಯನ್ ಲೈಕ್ : ಫೋಟೋ ಭಾರೀ ವೈರಲ್
Monday, January 17, 2022
ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ತಮ್ಮ ನಟನೆ ಮತ್ತು ಸೌಂದರ್ಯದಿಂದ ಲಕ್ಷಾಂತರ ಮಂದಿ ಅಭಿಮಾನಿಗಳ ಹೃದಯಗಳನ್ನು ಗೆದ್ದಿದ್ದಾರೆ. ಅವರು ತಮ್ಮ ಫೋಟೋಸ್ ಗಳ ಮೂಲಕ ಅಭಿಮಾನಿಗಳನ್ನು ತುಂಬಾ ಆಕರ್ಷಿಸುತ್ತಿರುತ್ತಾರೆ. ಅದಕ್ಕಾಗಿಯೇ ಸ್ಯಾಮ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ನಟಿ ಸಮಂತಾ ತನ್ನ ಬೋಲ್ಡ್ ಡ್ರೆಸ್ಸಿಂಗ್ ಸೆನ್ಸ್ ಮೂಲಕವೂ ಹುಬ್ಬೇರಿಸುವಂತೆ ಮಾಡುತ್ತಾರೆ. ಇದರಿಂದ ಅವರು ಫೋಟೋ ಶೂಟ್‌ಗಳಲ್ಲಿ ಧರಿಸುವ ಉಡುಪುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇತ್ತೀಚೆಗೆ, ನಟಿ ಸಮಂತಾ ಬಹಳಷ್ಟು ಫೋಟೋ ಶೂಟ್‌ಗಳನ್ನು ಮಾಡುತ್ತಾ ಆ ಫೋಟೊಗಳನ್ನು ಅಭಿಮಾನಿಗಳಿಗೆ ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ, ಇದೀಗ ನಟಿ ಸಮಂತಾ ಫೋಟೋ ಶೂಟ್‌ನ ಬೋಲ್ಡ್ ಉಡುಪು, ಸದ್ಯ ಎಲ್ಲರ ಗಮನ ಸೆಳೆದಿದೆ.
ಅಂದಹಾಗೆ, ನಟಿ ಸಮಂತಾ ಬ್ಯಾಕ್ ಲೆಸ್ ಟಾಪ್ ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 'ಟ್ರಾವಲ್ ಲೈಜರ್' ಎಂಬ ಮ್ಯಾಗಝಿನ್‌ಗೆ ನಟಿ ಮಾಡಿಕೊಂಡಿರುವ ಫೋಟೋಶೂಟ್‌ನಲ್ಲಿ ಎಜ್ರಾ ಕೌಚರ್ ದುಬೈನ ಗೌನ್ ಕಮ್ ಸಿಂಗಲ್ ಬ್ಯಾಕ್ ಲೆಸ್ ಟಾಪ್‌ನಲ್ಲಿ ಮಿರ ಮಿರ ಮಿಂಚಿದ್ದಾರೆ. ಈ ಫೋಟೋಗೆ ನಟಿ ಸಮಂತಾ 1 ಮಿಲಿಯನ್ ಗೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದ್ದಾರೆ. ನಟಿಯ ಈ ಬ್ಯಾಕ್ ಲೆಸ್ ಲುಕ್ ಕಂಡು ಪಡ್ಡೆ ಹುಡುಗರಂತೂ ಈಗಲೂ ನಿದ್ದೆ ಕೆಡಿಸಿಕೊಂಡಿದ್ದಾರೆ.
ಇದರ ಬಳಿಕ ನಟಿ ಮತ್ತೆ ಬಹಳಷ್ಟು ಫೋಟೋಶೂಟ್ ಗಳಲ್ಲಿ ಭಾಗವಹಿಸಿದ್ದರೂ, ಸಮಂತಾಳ ಈ ಬ್ಯಾಕ್ ಲುಕ್ ಮಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿದೆ.