
ಕೂದಲಿನಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದ ಪಂಜಾಬ್ ನ ಗಟ್ಟಿಗಿತ್ತಿ: ಈಕೆ ದೇಹದ ಅಂಗಾಂಗದಲ್ಲಿಯೇ ದಾಖಲೆ ಬರೆದಾಕೆ
Friday, January 7, 2022
ಚಂಡೀಗಢ (ಪಂಜಾಬ್): ಕೂದಲಿನಿಂದಲೇ ಬರೋಬ್ಬರಿ 12,216 ಕೆಜಿ ಭಾರದ ಬಸ್ಸನ್ನು ಎಳೆದು ಪಂಜಾಬ್‌ನ ಗಟ್ಟಿಗಿತ್ತಿ ಯುವತಿಯೋರ್ವಳು ಗಿನ್ನೆಸ್ ದಾಖಲೆ ಬರೆದಿದ್ದಾಳೆ.
ಪಂಜಾಬ್ ನ ಆಶಾ ರಾಣಿ ಈಗಾಗಲೇ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆದರೂ ಆಕೆಯ ಹೆಸರು ಅಷ್ಟಾಗಿ ಪ್ರಚಾರಕ್ಕೆ ಬಂದಿರಲ್ಲ. 2016ರಲ್ಲಿ ಕೂಡ ಇದೇ ರೀತಿಯ ದಾಖಲೆ ಸೃಷ್ಟಿಸಿದ್ದ ಆಶಾ ಇದೀಗ ತಮ್ಮದೇ ದಾಖಲೆಯನ್ನು ಮುಗಿದಿದ್ದಾರೆ.
ಆಶಾರಾಣಿ 2014ರಲ್ಲಿ ಕಣ್ಣಿನ ರೆಪ್ಪೆಯಿಂದಲೇ 15.15 ಕೆಜಿ ಭಾರವನ್ನು ಎತ್ತಿ ಗಿನ್ನೆಸ್ ದಾಖಲೆ ಮಾಡಿದ್ದಾರೆ. 2019ರಲ್ಲಿ ಕಿವಿಗಳಿಂದಲೇ 1,700 ಕೆಜಿ ತೂಕದ ವ್ಯಾನ್ ಅನ್ನು ಎಳೆದಿದ್ದರು. ಜೊತೆಗೆ ಹಲ್ಲುಗಳ ಸಹಾಯದಿಂದಲೃ ವಾಹನವನ್ನು ಕೇವಲ 22.16 ಸೆಕೆಂಡ್‌ಗಳಲ್ಲಿ 25 ಮೀಟರ್ ಎಳೆದಿದ್ದಾರೆ. ಹೀಗೆ ತಮ್ಮ ದೇಹದ ಬಹುತೇಕ ಅಂಗಾಂಗಳ ಮೂಲಕ ದಾಖಲೆಯನ್ನೇ ಸೃಷ್ಟಿಸಿದ್ದರು ಆಶಾ.
ಈ ಕಾರಣಕ್ಕೆ ಆಶಾ ಐರನ್ ಕ್ವೀನ್ ಎಂಬ ಖ್ಯಾತಿ ಪಡೆದಿದ್ದರು. ಇದೀಗ ಅವರು ಕೂದಲಿನಿಂದಲೇ ಬಸ್ ಅನ್ನು ಎಳೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಶ್ಲಾಘನೆಗಳ ಸುರಿಮಳೆಯೇ ಹರಿದಿದೆ.
ಆಶಾ 12,216 ಕೆಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ತಮ್ಮ ಕೂದಲಿನಲ್ಲಿ ಎಳೆದಿರುವ ವೀಡಿಯೋ ವೈರಲ್ ಆಗಿದೆ. ಈ ಆಶಾ ರಾಣಿಯವರ ಜಡೆಗೆ ಹಗ್ಗ ಬಿಗಿಯಲಾಗಿದ್ದು, ಅದರ ಸಹಾಯದಿಂದಲೇ ಕೆಂಪು ಮತ್ತು ಬೂದು ಬಣ್ಣದ ಡಬಲ್ ಡೆಕ್ಕರ್ ಬಸ್‍ನ್ನು ಎಳೆಯುತ್ತಿದ್ದಾರೆ. ಅವರು ಹಿಮ್ಮುಖವಾಗಿ ನಿಂತು ಹಿಂದೆ ಹೆಜ್ಜೆ ಹಾಕುತ್ತಿದ್ದಂತೆ, ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತದೆ. ಈ ಮೂಲಕ ಅವರು ಗಿನ್ನೆಸ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾರೆ.