
ನಟ ಸಿದ್ಧಾಂತ್ ಜೊತೆಗಿನ ಕಿಸ್ಸಿಂಗ್ ಸೀನ್ ಗೆ 48 ಬಾರಿ ರೀಟೇಕ್ ತೆಗೆದುಕೊಂಡೆ: ತಮ್ಮ ಅನುಭವ ಬಿಚ್ಚಿಟ್ಟ ನಟಿ ದೀಪಿಕಾ ಪಡುಕೋಣೆ
Monday, January 24, 2022
ಮುಂಬೈ: ಅತ್ಯಂತ ಹಾಟ್ ಹಾಗೂ ಸೆಕ್ಸಿ ಎನಿಸಿಕೊಂಡಿರುವ ಬಾಲಿವುಡ್ ಬೆಡಗಿಯರ ಪೈಕಿ ದೀಪಿಕಾ ಪಡುಕೋಣೆ ಕೂಡ ಓರ್ವರು. ಯಾವುದೇ ಸೀನ್‌ಗಳೇ ಆದರೂ ಸಾಕಷ್ಟು ರೀ ಟೇಕ್‌ಗಳನ್ನು ತೆಗೆದುಕೊಳ್ಳದೆ ದೃಶ್ಯವನ್ನು ಬೇಗನೇ ಮಾಡಿ ಮುಗಿಸುವ ನಟಿ ಎಂಬ ಖ್ಯಾತಿಯನ್ನೂ ಈಕೆ ಪಡೆದಿದ್ದಾರೆ.
ಆದರೆ ‘ಗೆಹ್ರಿಯಾನ್’ ಸಿನಿಮಾದಲ್ಲಿ ನಟ ಸಿದ್ಧಾಂತ್ ಜತೆಗಿನ ರೊಮಾನ್ಸ್ ದೃಶ್ಯವೊಂದರ ಬಗ್ಗೆ ತಮಗಾಗಿರುವ ಅನುಭವವನ್ನು ನಟಿ ದೀಪಿಕಾ ಇದೀಗ ಬಿಚ್ಚಿಟ್ಟಿದ್ದಾರೆ. ‘ಗೆಹ್ರಿಯಾನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟ ಸಿದ್ಧಾಂತ್ ಜತೆಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಕಿಸ್ಸಿಂಗ್ ಸೀನ್ ಕುರಿತಾಗಿ ದೀಪಿಕಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಸಾಧಾರಣವಾಗಿ ತಾನು ಯಾವುದೇ ಸೀನ್‌ಗಳಿಗೂ ಹೆಚ್ಚಿನ ರೀಟೇಕ್ ತೆಗೆದುಕೊಳ್ಳುವುದಿಲ್ಲ. ಆದರೆ ಸಿದ್ಧಾಂತ್ ಜತೆಗಿನ ಕಿಸ್ಸಿಂಗ್ ದೃಶ್ಯ ಮಾತ್ರ ನನಗೆ ಭಾರೀ ತೊಂದರೆಯನ್ನೇ ಕೊಟ್ಟುಬಿಟ್ಟಿದೆ. ಈ ರೊಮ್ಯಾನ್ಸ್ ಸೀನ್‌ಗೆ ನಾನು 48 ಬಾರಿ ರೀಟೇಕ್ ತೆಗೆದುಕೊಳ್ಳಬೇಕಾಯಿತು ಎಂದು ದೀಪಿಕಾ ಹೇಳಿದ್ದಾರೆ.
ಸಿದ್ಧಾಂತ್ ಜೊತೆಯಲ್ಲಿ ಈ ದೃಶ್ಯ ಮಾಡುವುದು ನನಗೆ ಭಾರಿ ಸವಾಲಿನದ್ದಾಗಿತ್ತು. ಅವರ ಜತೆ ಈ ದೃಶ್ಯ ಮಾಡಲು ನನಗೆ ಸಿಕ್ಕಾಪಟ್ಟೆ ಮುಜುಗರ ಉಂಟಾಗಿತ್ತು. ಆದ್ದರಿಂದ ಎಷ್ಟೇ ಸಲ ರೊಮ್ಯಾನ್ಸ್ ದೃಶ್ಯ ಟೇಕ್ ಆದರೂ ಅದು ಸರಿ ಬರುತ್ತಿರಲಿಲ್ಲ. 48ನೇ ಬಾರಿ ಸರಿಯಾಯಿತು ಎಂದಿದ್ದಾರೆ.
ಅಂದಹಾಗೆ ಗೆಹ್ರಿಯಾನ್ ಸಿನಿಮಾ ಫೆ.11 ರಂದು ಒಟಿಟಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ. ಅಲ್ಲದೇ, ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ದೀಪಿಕಾ ಹೆಚ್ಚಿನ ದೃಶ್ಯಗಳಲ್ಲಿ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ.