
ಅಬುಧಾಬಿ ಬಿಗ್ ಟಿಕೆಟ್ 50 ಕೋಟಿ ರೂ. ಲಾಟರಿ ಗೆದ್ದ ಕೇರಳ ಮೂಲದ ವ್ಯಕ್ತಿ!
Tuesday, January 4, 2022
ಅಬುಧಾಬಿ: ಇಲ್ಲಿನ ಬಿಗ್ ಟಿಕೆಟ್ ಸಾಪ್ತಾಹಿಕ ಡ್ರಾದಲ್ಲಿ ಕೇರಳ ಮೂಲದ ಅಬುಧಾಬಿ ನಿವಾಸಿಯೊಬ್ಬರು 25 ಮಿಲಿಯನ್ ದಿರ್ಹಮ್ (ಭಾರತೀಯ ಕರೆನ್ಸಿ ಪ್ರಕಾರ 50,63,66,900 ರೂ.) ಲಾಟರಿ ಗೆದ್ದಿದ್ದಾರೆ.
ಬಿಗ್ ಟಿಕೆಟ್ ಡ್ರಾ ವಿಜೇತ ಹರಿದಾಸನ್ ಮೂತ್ತತ್ತಿಲ್ ವಸುನ್ನಿ ಮೂಲತಃ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯವರು. ಅವರು ಕಳೆದ ಒಂದು ದಶಕದಿಂದ ಅಬುಧಾಬಿಯ ಅಲ್ ಐನ್ ಎಂಬಲ್ಲಿ ಮುಸ್ಸಾಫ ಇಂಡಸ್ಟ್ರಿಯಲ್ ಪ್ರದೇಶದ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಹರಿದಾಸನ್ ಡಿಸೆಂಬರ್ 30 ರಂದು ಬಿಗ್ ಟಿಕೆಟ್ ಅನ್ನು ಖರೀದಿಸಿದ್ದರು.
ಅವರು ಖರೀದಿಸಿರುವ ಟಿಕೆಟ್ ಸಂಖ್ಯೆ 232976ಗೆ ಇದೀಗ ಬಹುಮಾನ ಬಂದಿದೆ. ಅದು ಅಷ್ಟಿಷ್ಟು ಮೊತ್ತವಲ್ಲ. ಬರೋಬ್ಬರಿ 25 ಮಿಲಿಯನ್ ದಿರ್ಹಮ್ ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಅದರ ಮೊತ್ತ 50,63,66,900 ರೂ. ಆಗಿರುತ್ತದೆ.
ಡಿಸೆಂಬರ್ 2021ರಲ್ಲಿ ಬಿಗ್ ಟಿಕೆಟ್ ಕಂಪೆನಿ ಪ್ರತಿವಾರ 1 ಮಿಲಿಯನ್ ದಿರ್ಹಮ್ (2,06,34, 490) ನೀಡಿತ್ತು. ಈ ಬಿಗ್ ಟಿಕೆಟ್ ನಲ್ಲಿ ವೆಕಾರ್ ಜಾಫ್ರಿ, ಬ್ರಿಜೇಶ್, ಬೋಸ್, ರಫೀಕ್ ಮೊಹಮದ್ ಅಹ್ಮದ್, ಹರುಣ್ ಶೇಖ್ ವಿಜೇತರಾಗಿದ್ದಾರೆ. ಈ ಎಲ್ಲಾ ವಿಜೇತರು ಭಾರತೀಯ ಮೂಲದವರು ಎಂಬುದು ಗಮನಾರ್ಹ ಸಂಗತಿ.