
'ಹಿಂದೆ ತಿರುಗಿ ಕ್ಯಾಮೆರಾ ನೋಡಿ' ಎಂದ ಅದಿತಿ ಪ್ರಭುದೇವ್ ಹೇಳಿದರೂ ಭಾವಿ ಪತಿ ಕಿವಿಗೊಡಲಿಲ್ಲ: ವೀಡಿಯೋ ವೈರಲ್
Thursday, January 6, 2022
ಮಡಿಕೇರಿ: ಸ್ಯಾಂಡಲ್ ವುಡ್ ನಲ್ಲಿ ರಚಿತಾರಾಂ ಬಳಿಕ ಸದ್ಯ ಬೇಡಿಕೆಯಲ್ಲಿರುವ ನಟಿಯೆಂದರೆ ಅದಿತಿ ಪ್ರಭುದೇವ್. ಒಂದರ ಬಳಿಕ ಒಂದು ಸಿನಿಮಾಗಳ ಆಫರ್‌ಗಳನ್ನು ಪಡೆಯುತ್ತಾ ಎಲ್ಲರ ಮೆಚ್ಚಿನ ನಟಿಯೆನಿಸಿಕೊಂಡಿದ್ದಾರೆ.
ಇತ್ತೀಚೆಗೆ ತಾನೇ ಅವರು ಸದ್ದಿಲ್ಲದೆ ಕೃಷಿಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ಸುದ್ದಿಯಾಗಿದ್ದ ಅದಿತಿ ಪ್ರಭುದೇವ್ ಇದೀಗ ವೀಡಿಯೋವೊಂದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಗುಟ್ಟಾಗಿ ಕೊಡಗು ಮೂಲದ ಕಾಫಿ ತೋಟದ ಮಾಲಕ ಯಶಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಅದಿತಿ ಒಂದೇ ಒಂದು ಫೋಟೊವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದೀಗ ಅವರು ತಮ್ಮ ಭಾವಿಪತಿಯೊಂದಿಗೆ ಹೊಸ ವರ್ಷ ಆಚರಣೆ ಮಾಡಿರುವ ಕ್ಷಣವನ್ನು ವೀಡಿಯೋ ರೂಪದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕೊಡಗು, ಅಲ್ಲಿನ ಕಾಫಿ ಪ್ಲಾಂಟೇಷನ್, ಕಾಫಿ ಹಣ್ಣು, ಕಾಳು ಮೆಣಸು, ಪಶ್ಚಿಮ ಘಟ್ಟಗಳು, ಕಾಡಾನೆ, ಕಾಡು ಕೋಣ ನೋಡಿರುವ ಬಗ್ಗೆ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಈ ವೀಡಿಯೋದಲ್ಲಿ ಭಾವಿಪತಿಯ ಮುಖವನ್ನು ತೋರಿಸಲು ಮಾತ್ರ ಅದಿತಿಗೆ ಸಾಧ್ಯವಾಗಿಲ್ಲ. ಅದಿತಿ ಪ್ರಭುದೇವ್ ತಮ್ಮ ಭಾವೀ ಪತಿಗೆ 'ಹಿಂದೆ ತಿರುಗಿ ಕ್ಯಾಮೆರಾ ನೋಡಿ' ಎಂದರೂ ಯಶಸ್ ಅವರು ಹಿಂದೆ ನೋಡಲೇ ಇಲ್ಲ. ಸದ್ಯ, ನಟಿ ಶೇರ್ ಮಾಡಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.