
ಲಿಪ್ ಲಾಕ್ ದೃಶ್ಯಕ್ಕೆ ದುಪ್ಪಟ್ಟು ಸಂಭಾವನೆ ಪಡೆದ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್
Tuesday, January 18, 2022
ಹೈದರಾಬಾದ್: ತಮ್ಮ ಸಿನಿಮಾ ಅಭಿನಯದ ಕೆರಿಯರ್ ನಲ್ಲಿಯೇ ಇದುವರೆಗೂ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್, ತೆಲುಗಿನ “ರೌಡಿ ಬಾಯ್ಸ್” ಸಿನಿಮಾದಲ್ಲಿ ಬಹಳ ಬೊಲ್ಡ್ ಆಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಎಲ್ಲಾ ಕಟ್ಟುಪಾಡುಗಳನ್ನು ಬದಿಗಿಟ್ಟು ಹೊಸ ಹೀರೋ ಜೊತೆಗೆ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸುವುದರ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಇತ್ತೀಚೆಗಷ್ಟೇ ಅನುಪಮಾ ಪರಮೇಶ್ವರನ್ ಅಭಿನಯದ 'ರೌಡಿ ಬಾಯ್ಸ್' ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಅನುಪಮಾ ಲಿಪ್ಲಾಕ್ ದೃಶ್ಯದಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅನುಪಮಾ ಲಿಪ್ಲಾಕ್ ಮಾಡಿದ್ದು, ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಈ ಸಿನಿಮಾಕ್ಕಾಗಿ ಅನುಪಮಾ ಪರಮೇಶ್ವರನ್ 50 ಲಕ್ಷ ರೂ. ಸಂಭಾವನೆಯನ್ನು ಪಡೆದಿದ್ದಾರಂತೆ. ಈ ಮೊದಲು ಅವರು ಒಂದು ಸಿನಿಮಾಕ್ಕೆ 20 ರಿಂದ 25 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ ಇದೀಗ ಅನುಪಮಾ ಈ ಸಿನಿಮಾಕ್ಕೆ ದುಪ್ಪಟ್ಟು ಸಂಭಾವನೆ ಪಡೆದುಕೊಂಡಿದ್ದಾರೆ.
ಇನ್ನು ಅನುಪಮಾ ಲಿಪ್ಲಾಕ್ ದೃಶ್ಯ ನೋಡಿ ಅಭಿಮಾನಿಗಳ ಹೃದಯ ಬಿರಿಯುವಂತಾಗಿದೆ. ಅನುಪಮಾರನ್ನು ಅಭಿಮಾನಿಗಳು ಯಾವಾಗಲೂ ಪಕ್ಕದ ಮನೆ ಹುಡುಗಿಯ ಹಾಗೇ ಕಾಣುತ್ತಿದ್ದರು. ಎಲ್ಲೂ ಅವರು ತಮ್ಮ ಗ್ಲಾಮರ್ ಅನ್ನು ಹೆಚ್ಚಾಗಿ ಪ್ರದರ್ಶಿಸದೆ ಸಹಜ ಅಭಿನಯದಿಂದಲೇ ಮನೆ ಮಾತಾಗಿದ್ದರು. ಆದರೆ ಇದೀಗ ಈ ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಹೀರೋ ಜೊತೆಗೆ ಲಿಪ್ಲಾಕ್ ಮಾಡಿರುವುದು ಅನುಪಮಾ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಇದೆಲ್ಲ 'ಏನಮ್ಮಾ ಅನುಪಮಾ?' ಎಂದು ಪ್ರಶ್ನಿಸುತ್ತಿದ್ದಾರೆ.