
ಪಕ್ಕದ ಮನೆಯಾಕೆಯನ್ನು 'ಐಶ್ವರ್ಯಾ ರೈ ಥರಹ ಕಾಣುತ್ತಿದ್ದಿಯಾ' ಎಂದು ಕೈಹಿಡಿದೆಳೆದ ಕಾಮುಕ ಅಂದರ್!
Tuesday, January 4, 2022
ಬೆಂಗಳೂರು: ನೀರಿನ ನೆಪವೊಡ್ಡಿ ಕಾಮುಕನೋರ್ವನು ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿ 'ಐಶ್ವರ್ಯಾ ರೈ ಥರಹ ಕಾಣುತ್ತಿದ್ದಿಯಾ' ಎಂದು ಕೈಹಿಡಿದು ಎಳೆದಿರುವ ಘಟನೆ ದೊಡ್ಡ ಬಿದರಕಲ್ಲಿನಲ್ಲಿನಲ್ಲಿ ನಡೆದಿದೆ.
ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ನಗರದ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹನುಮಂತರಾಯ ತನ್ನ ಪಕ್ಕದ ಮನೆಯ ಮಹಿಳೆಯಲ್ಲಿ ನೀರು ಕೊಡುವಂತೆ ಕೇಳಿದ್ದಾನೆ. ಆಕೆ ನೀರು ಕೊಡುತ್ತಿದ್ದಂತೆ, 'ನೀನು ಐಶ್ವರ್ಯಾ ರೈ ಥರಹ ಕಾಣುತ್ತಿದ್ದೀಯಾ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ನಿನ್ನ ಪ್ರತಿಬಿಂಬ ಕಾಣುತ್ತದೆ' ಎಂದು ಕೈ ಹಿಡಿದು ಎಳೆದಿದ್ದಾನೆ.
ಆರೋಪಿ ಅಸಭ್ಯಾಗಿ ವರ್ತಿಸುತ್ತಿದ್ದಂತೆ ಮಹಿಳೆ ಸಹಾಯಕ್ಕಾಗಿ ಬೊಬ್ಬೆಹಾಕಿದ್ದಾರೆ. ಆಹಯ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಮಹಿಳೆ ಪೀಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಕಾಮುಕ ಹನುಮಂತರಾಯನನ್ನು ಬಂಧಿಸಿದ್ದು, ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದೇವೆ ಎಂದು ಈ ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.