
ನಾದಿನಿ ಮೇಲೆ ಕಣ್ಣು ಹಾಕಿದ ಕಾಮುಕ ಭಾವ ಆಕೆಯನ್ನು ಅಪಹರಿಸಿ ಕಂಬಿ ಹಿಂದೆ ಸೆರೆಯಾದ!
Tuesday, January 25, 2022
ಬೆಂಗಳೂರು: ಪತ್ನಿಯ ತಂಗಿಯ ಮೇಲೆಯೇ ಕಣ್ಣು ಹಾಕಿದ ಭಾವನೋರ್ವನು ನಾದಿನಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಲ್ಲದೇ ಆಕೆಯನ್ನು ಅಪಹರಿಸಿದ್ದಾನೆ. ಇದೀಗ ಕಾಮುಕ ಭಾವ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ದೇವರಾಜ್ ಹಾಗೂ ಆತನ ಸಹಚರ ನವೀನ್ಕುಮಾರ್ ಸೇರಿದಂತೆ ಮತ್ತೋರ್ವನು ಬಂಧಿತರು.
ಕೊಡಿಗೆಹಳ್ಳಿ ನಿವಾಸಿ ದೇವರಾಜ್ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ. ಇದೀಗ ಆತನು ಪತ್ನಿಯ ತಂಗಿ(ನಾದಿನಿ)ಯ ಮೇಲೆ ಕಣ್ಣಯ ಹಾಕಿದ್ದ. ಅಲ್ಲದೆ ಆರೋಪಿ ತನ್ನನ್ನೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆಕೆ ಭಾವನ ಬೇಡಿಕೆಯನ್ನು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಭಾವ ದೇವರಾಜ್, ನಾದಿನಿಯನ್ನು ಹೇಗಾದರೂ ಮಾಡಿ ಮದುವೆ ಮಾಡಿಕೊಳ್ಳಬೇಕೆಂಬ ಹಠದಿಂದ ಕಳೆದ ಶನಿವಾರ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ನಾದಿನಿಯನ್ನು ತನ್ನ ಸಹಚರರ ಜೊತೆ ಸೇರಿಕೊಂಡು ಕಾರಿನಲ್ಲಿ ಅಪಹರಿಸಿದ್ದಾನೆ.
ಈ ಕುರಿತು ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.