
ಕಾಪು: ಕಾಂಗ್ರೆಸ್ ಕಾರ್ಯಕರ್ತೆಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು
Saturday, January 22, 2022
ಮಂಗಳೂರು: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿಸೋಜರಿಗೆ ನಿನ್ನೆ ಸಂಜೆ ವ್ಯಕ್ತಿಯೋರ್ವನು ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ.
ಕುಡಿತದ ಚಟ ಹೊಂದಿದ್ದ ಈ ವ್ಯಕ್ತಿ ರೀನಾ ಡಿಸೋಜರ(35) ನೆರೆಮನೆಯವನಾಗಿದ್ದ. 45 ವರ್ಷ ಪ್ರಾಯದ ಈ ವ್ಯಕ್ತಿ ರೀನಾ ಡಿಸೋಜ ಅವರು ತನ್ನ ಮನೆಯ ಬಳಿ ಮಾತನಾಡುತ್ತಿದ್ದ ಸಂದರ್ಭ ಏಕಾಏಕಿ ಅವರ ಹೊಟ್ಟೆಗೆ ಇರಿದು ಓಡಿ ಹೋಗಿದ್ದಾನೆ. ಈತ ಕ್ಷುಲ್ಲಕ ಕಾರಣಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ.