
ಶಿರ್ವದಲ್ಲಿ ಜಾನುವಾರು ಕಳವಿಗೆ ಖದೀಮರಿಂದ ಹೊಸ ತಂತ್ರ: ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಮದುವೆ ಅಲಂಕೃತ ಕಾರಿನಲ್ಲಿ ಗೋಸಾಗಾಟ !
Thursday, January 13, 2022
ಶಿರ್ವ: ಕರಾವಳಿಯಲ್ಲಿ ಎಗ್ಗಿಲ್ಲದೆ ಗೋಸಾಗಟ ಮುಂದುವರೆದಿದ್ದು, ಪೊಲೀಸರು, ಹಿಂದೂ ಸಂಘಟನೆಯ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚಲು ಹೊಸ ಹೊಸ ತಂತ್ರಗಳ ಮೂಲಕ ದನಗಳನ್ನು ಸಾಗಾಟ ಮಾಡಲಾಗುತ್ತಿದೆ. ಇದೇ ರೀತಿಯ ಪ್ರಕರಣವೊಂದು ಉಡುಪಿ ತಾಲೂಕಿನ ಶಿರ್ವದಲ್ಲಿ ನಡೆದಿದೆ.
ಗೋಕಳ್ಳರು ಹೊಸ ತಂತ್ರವನ್ನು ಹೂಡಿ ಮದುವೆಯ ಸಂಚಾರಕ್ಕೆಂದು ಸಿಂಗಾರಗೊಂಡ ರೀತಿಯಲ್ಲಿ ಇನ್ನೋವಾ ಕಾರನ್ನು ರೆಡಿ ಮಾಡಿ ಹಿಂದೆ ಪಿಕಪ್ ವಾಹನದಲ್ಲಿ ಕಳ್ಳರು ದನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಮದುವೆ ವಾಹನದಂತೆಯೇ ಶೃಂಗರಿಸಿದ್ದ ಇನ್ನೋವಾ ವಾಹನದ ಹಿಂದಿದ್ದ ಪಿಕಪ್ ವಾಹನದಲ್ಲಿ 16 ದನಗಳನ್ನು ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ರೀತಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವುದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿದ್ದಾರೆ. ಪರಿಣಾಮ ಪ್ರಕರಣ ಬಹಿರಂಗಗೊಂಡಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.