-->
ಬೆಂಗಳೂರು: ಹಿಟಾಚಿಯಡಿಗೆ ಸಿಲುಕಿ ಮೂರು ವರ್ಷದ ಮಗು ದಾರುಣ ಸಾವು

ಬೆಂಗಳೂರು: ಹಿಟಾಚಿಯಡಿಗೆ ಸಿಲುಕಿ ಮೂರು ವರ್ಷದ ಮಗು ದಾರುಣ ಸಾವು

ಬೆಂಗಳೂರು: ಹಿಮ್ಮುಖವಾಗಿ ಚಲಿಸಿದ ಹಿಟಾಚಿ ಹರಿದ ಪರಿಣಾಮ ಮೂರು ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಉಪ್ಪಾರಪೇಟೆ ಧ್ವನಂತರಿ ರಸ್ತೆಯಲ್ಲಿ ಶನಿವಾರ ನಡೆದಿದೆ.

ಸಿಮಿಯಾನ್ (3) ಮೃತಪಟ್ಟ ಮಗು. ಸಿಮಿಯಾನ್ ತನ್ನ ತಂದೆಯೊಂದಿಗೆ ಮನೆಯಿಂದ ಹೊರಗೆ ಬಂದಿದೆ. ಈ ಸಂದರ್ಭ ಹಿಟಾಚಿ ರಿವರ್ಸ್ ಬಂದು ಮಗು ಅದರಡಿಗೆ ಸಿಲುಕಿ ಈ ಹೃದಯವಿದ್ರಾವಕ ಘಟನೆ ನಡೆದಿದೆ ಎನ್ನಲಾಗಿದೆ. ಚಾಲಕ ಗಮನಿಸದೆ ಇರುವುದರಿಂದ ರಿವರ್ಸ್ ಬರುತ್ತಿದ್ದ ಹಿಟಾಚಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಮಗು ಸಾವನ್ನಪ್ಪಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಟಾಚಿ ಚಾಲಕ ಶಂಕರ್ ನಾಯಕ್ ನನ್ನು ಪೊಲೀಸರು ಬಂಧಿಸಿದ್ದಾರೆ‌‌. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article