
ನಾಗಮಂಗಲ: ಬಸ್ - ಕಾರು ನಡುವಿನ ಭೀಕರ ಅಪಘಾತಕ್ಕೆ ನವದಂಪತಿ ಸೇರಿ ಮೂವರು ಬಲಿ!
Sunday, January 2, 2022
ಬೆಂಗಳೂರು: ನಾಗಮಂಗಲದಲ್ಲಿ ನಡೆದ ಭೀಕರ ಅಪಘಾತಕ್ಕೆ 20 ದಿನದ ಹಿಂದಷ್ಟೇ ಮದುವೆಯಾದ ಜೋಡಿ ಸೇರಿ ಮೂವರು ಬಲಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಸೋಮವಾರಪೇಟೆ ಮೂಲದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ (55) ಮೃತ ದುರ್ದೈವಿಗಳು.
20 ದಿನಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ ಜೋಡಿ ಸುದೀಪ್ ಹಾಗೂ ಶ್ರೀಜಾ ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರಕ್ಕೆ ಕುಟುಂಬದೊಂದಿಗೆ ಪೂಜೆಗೆ ಬಂದಿದ್ದರು. ಪೂಜೆ ಮುಗಿಸಿ ವಾಪಸ್ ಸೋಮವಾರಪೇಟೆಗೆ ಹೋಗುಸ ಸಂದರ್ಭ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕೆಂಪನಕೊಪ್ಪಲು ಬಳಿ ಬಸ್ ಇವರ ಕಾರಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರಲ್ಲಿ ನವಜೋಡಿ ಸೇರಿದಂತೆ ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಬಸ್ ಚಾಲಕ ಸೇರಿದಂತೆ ಬಸ್ ನಲ್ಲಿದ್ದ ನಾಲ್ವರು ಪ್ರಯಾಣಿಕರಿಗೂ ಗಾಯವಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.