
ಉಡುಪಿ: ಅಯ್ಯಪ್ಪ ವೃತಾಧಾರಿ ಶಬರಿಮಲೆಯಲ್ಲಿ ಹೃದಯಾಘಾತದಿಂದ ಸಾವು
Sunday, January 16, 2022
ಉಡುಪಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಹಠಾತ್ ಮೃತಪಡುವವರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದೆ. ಇಂದು ಇಂತಹದ್ದೇ ಮತ್ತೊಂದು ಪ್ರಕರಣವೊಂದು ನಡೆದಿದೆ. ಅಯ್ಯಪ್ಪ ವೃತಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಹೋಗಿದ್ದ ವ್ಯಕ್ತಿಯೊಬ್ಬರು ಶಬರಿಮಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಉದ್ಯಾವರದ ಸುರೇಶ್ ಬಂಗೇರ (52) ಎಂಬವರು ಮೃತಪಟ್ಟ ಅಯ್ಯಪ್ಪ ವೃತಾಧಾರಿ.
ಸುರೇಶ್ ಬಂಗೇರ ಅಯ್ಯಪ್ಪ ವೃತಧಾರಿಯಾಗಿ ವ್ರತದಲ್ಲಿದ್ದರು. ಉದ್ಯಾವರ ಅಯ್ಯಪ್ಪಸ್ವಾಮಿ ಮಂದಿರದಿಂದ ಶಬರಿ ಮಲೆಗೆ ಯಾತ್ರೆಯನ್ನು ಕೈಗೊಂಡಿದ್ದರು. ಇವರೊಂದಿಗೆ ಒಟ್ಟು 32 ಮಂದಿ ಶಬರಿಮಲೆಗೆ ತೆರಳಿದ್ದರು.
ಮಹಾಪೂಜೆಯಾಗಿ ಇರುಮುಡಿ ಕಟ್ಟಿ ರೈಲು ಮುಖಾಂತರ ಹೊರಟಿದ್ದ, ಇವರು ಶಬರಿಮಲೆಯಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ಸುರೇಶ್ ಬಂಗೇರ ಉದ್ಯಾವರ ಸಂಪಿಗೆ ನಗರ ನಿವಾಸಿಯಾಗಿದ್ದು, ರಿಕ್ಷಾ ಚಾಲಕರಾಗಿದ್ದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.