
ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಓಡಿಹೋದ ಯುವತಿ ದುರಂತ ಅಂತ್ಯ
Friday, January 28, 2022
ಚಿತ್ರದುರ್ಗ: ಮೂರು ತಿಂಗಳ ಹಿಂದೆ ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಯುವತಿಯೋರ್ವಳು ದುರಂತ ಅಂತ್ಯಕಂಡಿದ್ದಾಳೆ. ಈಕೆಯ ಪ್ರಿಯಕರ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ನಿವಾಸಿ ದಿವ್ಯಾ(22) ಮೃತ ದುರ್ದೈವಿ.
ದಿವ್ಯಾರಿಗೆ ಈಗಾಗಲೇ ಬೇರೊಬ್ಬರೊಂದಿಗೆ ಮದುವೆಯಾಗಿತ್ತು. ಆದರೂ ಪತಿಯನ್ನು ತೊರೆದು ದಿವ್ಯಾ 3 ತಿಂಗಳ ಹಿಂದೆ ಪ್ರಿಯಕರ ಮಂಜುನಾಥ್ ನೊಂದಿಗೆ ಈಡಿಹೋಗಿದ್ದಳು. ಇವರಿಬ್ಬರೂ ಹಿರಿಯೂರು ಪಟ್ಟಣದಲ್ಲಿ ವಾಸವಾಗಿದ್ದರು.
ಇತ್ತೀಚಿಗೆ ದಿವ್ಯಾ ಜ್ವರವೆಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದಿವ್ಯಾ ಮೈಮೇಲೆ ಬರೆ ಹಾಗೂ ಪರಚಿದ ಗಾಯದ ಗುರುತುಗಳಿವೆ. ಹಲ್ಲೆ ಮಾಡಿ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಮೃತಳ ಪಾಲಕರು ಪ್ರಿಯಕರ ಮಂಜುನಾಥ್ ವಿರುದ್ಧ ಆರೋಪ ಮಾಡಿದ್ದಾರೆ.
ಇತ್ತ ದಿವ್ಯಾ ಸಾವಿನಿಂದ ಕಂಗೆಟ್ಟ ಪ್ರಿಯಕರ ಮಂಜುನಾಥ್, ವಿಷ ಸೇವನೆ ಮಾಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕ ದಿವ್ಯಾಳ ಸಾವಿನ ರಹಸ್ಯ ಹೊರಬರಬೇಕಿದೆ.