
ಸ್ನೇಹಿತರೊಂದಿಗೆ ಪತ್ನಿಯನ್ನು ಹಂಚಿ ಸಾಮೂಹಿಕ ಅತ್ಯಾಚಾರ ಮಾಡಿದ ಪತಿ: ಮಹಿಳೆಯ ಗುಪ್ತಾಂಗವನ್ನು ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದ ಕಾಮುಕರು
Monday, January 17, 2022
ಇಂದೋರ್: ಪತಿಯೇ ಪತ್ನಿಯನ್ನು ತನ್ನ ಗೆಳೆಯರೊಂದಿಗೆ ಹಂಚಿಕೊಂಡು ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶ ರಾಜ್ಯದ ಇಂದೋರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
32 ವರ್ಷದ ಈ ಯುವತಿಯ ಮೇಲೆ ಆಕೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿ ಚಿತ್ರಹಿಂಸೆ ನೀಡಿದ್ದಾರೆ. ತನ್ನ ಪತಿ ತನ್ನನ್ನು ಕ್ರೂರವಾಗಿ ನಡೆಸಿಕೊಂಡಿದ್ದು, ಸ್ನೇಹಿತರಿಗೆ ನನ್ನನ್ನು ಒಪ್ಪಿಸಿದ್ದಾನೆ ಅವರೆಲ್ಲರೂ ಸೇರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಗುಪ್ತಾಂಗವನ್ನು ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ ಎಂದು ಮಹಿಳೆ ತನ್ನ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಬಿಚ್ಚಿಟ್ಟಿದ್ದಾಳೆ.
ಮಹಿಳೆಯೊಂದಿಗೆ ಅವರು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎನ್ನಲಾಗ್ತಿದೆ. ಆರೋಪಿಗಳು ಎಸಗಿರುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ ಹಿನ್ನೆಲೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಂತೆ.
ನವೆಂಬರ್ 2019 ಮತ್ತು ಅಕ್ಟೋಬರ್ 2021 ರ ಮಧ್ಯದ ಸಮಯದಲ್ಲಿ ಇಂದೋರ್‌ನ ಶಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್‌ಹೌಸ್‌ನಲ್ಲಿ ಈ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಛತ್ತೀಸ್‌ಗಢ ಮೂಲದ ಈ ಮಹಿಳೆಗೆ ಇಂದೋರ್ ಮೂಲದ ವ್ಯಕ್ತಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾಗಿದ್ದ. ಆ ಬಳಿಕ ಇಬ್ಬರೂ ವಿವಾಹವಾಗಿದ್ದರು. ಆದರೆ ಪೊಲೀಸ್ ತನಿಖೆ ನಡೆಸಿದಾಗ ಆ ವ್ಯಕ್ತಿಗೆ ಈಗಾಗಲೇ ಬೇರೆಯವಳೊಂದಿಗೆ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ಹೇಗೋ ಫಾರ್ಮ್‌ಹೌಸ್‌ನಿಂದ ತಪ್ಪಿಸಿಕೊಂಡು ಛತ್ತೀಸ್‌ಗಢದಲ್ಲಿರುವ ತನ್ನ ಪೋಷಕರ ಮನೆಗೆ ಸೇರಿದ್ದಾಳೆ. ಅಲ್ಲಿಗೂ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಹಿಂಬಾಲಿಸಿಕೊಂಡು ಬಂದಿದ್ದ ಎಂದು ಮಹಿಳೆ ದೂರಿದ್ದಾಳೆ.
ಪೊಲೀಸಲರು ಸಂತ್ರಸ್ತೆಯ ಪತಿ ಸೇರಿದಂತೆ ಐವರ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ವಿವಿಧ ಪ್ರದೇಶಗಳಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.