
ಅಭಿಮಾನಿಗಳಿಗೆ '#levelupchallenge' ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಹೊಸ ವರ್ಕೌಟ್ ಚಾಲೆಂಜ್ ನೀಡಿದ ನಟಿ ಸಮಂತಾ!
Thursday, January 13, 2022
ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ತಾವು ವರ್ಕೌಟ್ ಮಾಡುವ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹೊಸ ಚಾಲೆಂಜ್ ಅನ್ನು ಆರಂಭಿಸಿದ್ದಾರೆ.
ಹೌದು, ತಾವು ವರ್ಕೌಟ್ ಮಾಡುವ ವೀಡಿಯೋವೊಂದನ್ನು ಹಂಚಿಕೊಳ್ಳುತ್ತಾ ನಟಿ ಸಮಂತಾ, 'ಯಾವುದೇ ಸಲಕರಣೆಗಳು ಇಲ್ಲದೆ ಮಾಡುವ ಈ 'ಲೆವೆಲ್ - ಅಪ್' ಸವಾಲನ್ನು ಸ್ವೀಕರಿಸುವ ಮೂಲಕ ನಿಮ್ಮ 2022 ಅನ್ನು ಕಿಕ್‌ಸ್ಟಾರ್ಟ್ ಮಾಡಿ ಎಂದಿದ್ದಾರೆ. ಅಲ್ಲದೆ ಮತ್ತೆ ಮುಂದುವರಿಸಿ ನನ್ನ ಜಿಮ್ ಟ್ರೈನರ್ @ junaid.shaikh88 ನನಗೆ ಈ ಸವಾಲು ನೀಡಿದ್ದಾರೆ. ಈಗ ನಾನು ನಿಮಗೆಲ್ಲರಿಗೂ ಈ ಸವಾಲು ಹಾಕುತ್ತೇನೆ ಎಂದು '#levelupchallenge' ಎಂದು ಹ್ಯಾಶ್ ಟ್ಯಾಗ್ ನಲ್ಲಿ ಬರೆದುಕೊಂಡಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಈ ವೀಡಿಯೋ ನೋಡಿರುವ ಹಲವಾರು ಅಭಿಮಾನಿಗಳು ಈ ಸವಾಲನ್ನು ಸ್ವೀಕರಿಸಿದ್ದಾರೆ. ಜೊತೆಗೆ, ಅವರು ಈ ಚಾಲೆಂಜ್ ಅನ್ನು ಮಾಡುವ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. #LevelUpChallenge ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡು ಸಮಂತಾ ಅವರನ್ನು ಟ್ಯಾಗ್ ಮಾಡಿ ಅವರ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.
ಈ ಮೂಲಕ ನಟಿ ಸಮಂತಾ ಅವರು ವರ್ಕೌಟ್ ಮಾಡಲು ತಮ್ಮ ಅಭಿಮಾನಿಗಳನ್ನು ಪ್ರೇರೇಪಿಸಿದ್ದಾರೆ. ನಟಿಯ ಈ #levelupchallenge @ase fee fea ಗಂಟೆಯಲ್ಲಿ ಬರೋಬ್ಬರಿ 14 ಲಕ್ಷ ಅಂದರೆ 1 ಮಿಲಿಯನ್‌ಗೂ ಹೆಚ್ಚು ಲೈಕ್ಸ್‌ಗಳು ಪಡೆದಿದ್ದು, 5,000 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಿಟ್ಟಿಸಿಕೊಂಡಿದೆ.