
ಮಿಸೆಸ್ ಸೌತ್ ಇಂಡಿಯಾಗೆ ಆಡಿಷನ್ ಸಿದ್ಧ: ಯುವತಿಯರಲ್ಲದೆ ಮಹಿಳೆಯರಿಗೂ ಅವಕಾಶ
Friday, January 28, 2022
ಬೆಂಗಳೂರು: ಯುವತಿಯರು ಹಾಗೂ ಮಹಿಳೆಯರಿಗೆ ಮಿಸೆಸ್ ಸೌತ್ ಇಂಡಿಯಾ ಆಗುವ ಭಾರೀ ಅವಕಾಶವೊಂದು ತೆರೆದುಕೊಂಡಿದೆ.
'ಮಿಸೆಸ್ ಸೌತ್ ಇಂಡಿಯಾ ಐ ಆ್ಯಮ್ ಪವರ್‌ಫುಲ್-2022' ಸ್ಪರ್ಧೆಯ ಆಡಿಷನ್‌ಗೆ ವೇದಿಕೆ ಇದೀಗ ಸಜ್ಜಾಗಿದೆ. ವಿಶೇಷವೆಂದರೆ ಈ ಆಡಿಷನ್ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ನಡೆಯಲಿದೆ. ಫೆ.18ರಂದು ಬೆಳಗ್ಗೆ 10ರಿಂದ ವೈಟ್ಫೀಲ್ಡ್ನಲ್ಲಿರುವ ಮ್ಯಾರಿಯಟ್ ಹೋಟೆಲ್ನಲ್ಲಿ ಈ ಆಡಿಷನ್ ನಡೆಯಲಿದೆ.
‘ಮಿಸೆಸ್ ಸೌತ್ ಇಂಡಿಯಾ ಐ ಆ್ಯಮ್ ಪವರ್‌ಫುಲ್-2022’ ಎಂಬ ಶೀರ್ಷಿಕೆಯುಳ್ಳ ಈ ಸೌಂದರ್ಯ ಸ್ಪರ್ಧೆಯನ್ನು ನಂದಿನಿ ನಾಗರಾಜ್ ಎಂಬವರು ಆಯೋಜಿಸಿದ್ದಾರೆ. ಇದರಲ್ಲಿ ಯುವತಿಯರು ಮಾತ್ರವಲ್ಲದೆ ಮಹಿಳೆಯರಿಗೂ ಅವಕಾಶ ನೀಡಲಾಗಿದೆ. ಅಂದರೆ 18ರಿಂದ 55 ವರ್ಷದೊಳಗಿನ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಅವರಲ್ಲಿ ಐವತ್ತು ಮಂದಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಈ 50 ಮಂದಿಯಲ್ಲಿ ವಿಜೇತರಾದವರು 'ಮಿಸೆಸ್ ಸೌತ್ ಇಂಡಿಯಾ ಐ ಆ್ಯಮ್ ಪವರ್‌ಫುಲ್-2022'ರ ಮುಖ್ಯ ಸ್ಪರ್ಧೆಗೆ ಪ್ರವೇಶ ಪಡೆಯಲಿದ್ದಾರೆ. ಅಲ್ಲಿಯೂ ವಿಜೇತರಾದವರು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9901755163 ಕ್ಕೆ ಕರೆ ಮಾಡಬಹುದು.