
ಆಸ್ತಿ ವಿವಾದ: ಸೋದರಿಯನ್ನೇ ಕಲ್ಲು ಎತ್ತಿ ಹಾಕಿ ಹತ್ಯೆಗೈದ ಸೋದರ!
Tuesday, January 18, 2022
ದೊಡ್ಡಬಳ್ಳಾಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸಹೋದರನೋರ್ವನು ಒಡಹುಟ್ಟಿದ ತಂಗಿಯ ತಲೆ ಮೇಲೆಯೇ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಗುಂಡ್ಲಹಳ್ಳಿ ಬಳಿಯ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಸುಶೀಲಮ್ಮ(40) ಮೃತಪಟ್ಟ ಮಹಿಳೆ. ಆಕೆಯ ಸಹೋದರ ನಾಗರಾಜ್ (45) ಹತ್ಯೆ ಮಾಡಿದವರು.
ಜಮೀನು ಮಾರಿದ್ದ ದುಡ್ಡಿನ ವಿಚಾರವಾಗಿ ಅಣ್ಣ-ತಂಗಿಯ ಮಧ್ಯೆ. ಜಗಳ ನಡೆದಿತ್ತು. ಇದೇ ವಿಚಾರವಾಗಿ ವಾಗ್ವಾದ ನಡೆದು ಆರೋಪಿ ನಾಗರಾಜ್ ತನ್ನ ತಂಗಿ ಸುಶೀಲಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಹತ್ಯೆಮಾಡಿದ್ದನೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಪೊಲೀಸರು ಆರೋಪಿ ನಾಗರಾಜ್‌ನನ್ನು ಪೊಲೀಸರು ಬಂಧಿಸಲಾಗಿದೆ.
ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ದೊಡ್ಡಬೆಳವಂಗಲ ಠಾಣೆ ಸಬ್ ಇನ್ಸ್‌ಪೆಕ್ಟರ್ ಜ್ಞಾನಮೂರ್ತಿ ಸ್ಥಳ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.