
ವಿಚ್ಛೇದನವಾದ ಮೂರೇ ತಿಂಗಳಿಗೆ ನಾಗಚೈತನ್ಯ ಹೊಸ ಲವ್ ಸ್ಟೋರಿ ಆರಂಭವೆಂದ ನೆಟ್ಟಿಗರು: ಹುಡುಗಿ ಯಾರು ಗೊತ್ತೇ?
Wednesday, January 12, 2022
ಹೈದರಾಬಾದ್: ಟಾಲಿವುಡ್‌ನ ಕ್ಯೂಟ್ ಜೋಡಿಯೆಂದೇ ಖ್ಯಾತರಾಗಿದ್ದ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಪರಸ್ಪರ ವಿಚ್ಛೇದನ ಪಡೆದ ಬಳಿಕ ನೆಟ್ಟಿಜನ್ ಗಳಿಗೆ ಭಾರೀ ಆಹಾರವಾಗಿದ್ದರು. ಯಾವಾಗ ನೋಡಿದರೂ ಒಂದಿಲ್ಲೊಂದು ವಿಚಾರದಲ್ಲಿ ಇವರದ್ದೇ ವಿಷಯದಲ್ಲಿ ಮಾತುಗಳು ಬರುತ್ತಿತ್ತು. ಅದರಲ್ಲೂ ವಿಚ್ಛೇದನ ವಿಚಾರದಲ್ಲಿ ನೆಟ್ಟಿಗರು ಕೇವಲ ನಟಿ ಸಮಂತಾರದ್ದೇ ತಪ್ಪು ಎಂಬಂತೆ ಸುದ್ದಿಗಳನ್ನು ಹಬ್ಬಿಸಿ ಹೆಚ್ಚು ಚರ್ಚಿಸ ತೊಡಗಿದ್ದರು. ಪರಿಣಾಮ, ನಟಿ ಸಮಂತಾ ಕಳೆದ ವರ್ಷ ಭಾರೀ ಸುದ್ದಿಯಲ್ಲಿದ್ದ ಸೌತ್‌ನ ಖ್ಯಾತ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು. ಆದರೆ 2022ರಲ್ಲಿ ನಟ ನಾಗಚೈತನ್ಯ ಹೆಚ್ಚು ಸುದ್ದಿಯಾಗುತ್ತಿದ್ದಾರೆ.
ಹೌದು, ಸದ್ಯಕ್ಕೀಗ ಸಾಮಾಜಿಕ ಜಾಲತಾಣದಲ್ಲಿ ನಾಗಚೈತನ್ಯರದ್ದೇ ಸದ್ದು, ಸುದ್ದಿ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದೆ ನಾಗಚೈತನ್ಯ ಹಾಗೂ ನಟಿ ಸಾಯಿ ಪಲ್ಲವಿ ನಡುವೆ ಲವ್ವಿ ಡವ್ವಿ ಶುರುವಾಗಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಅದಕ್ಕೆ ಕಾರಣ ಅವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದ 'ಲವ್ ಸ್ಟೋರಿ' ಸಿನಿಮಾ ಆದರೀಗ, ನಾಗಚೈತನ್ಯ ಹಾಗೂ ನಟಿ ದಕ್ಷ ನಗರ್ಕರ್ ನಡುವೆ ಏನೋ ಗುಸು ಗುಸು, ಡೇಟಿಂಗ್ ಆರಂಭವಾಗಿದೆ ಎಂಬ ಸುದ್ದಿ ಕೇಳಿಬರುತ್ತಿವೆ.
ಇದಕ್ಕೆ ಕಾರಣ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿರುವ 'ಬಂಗಾರ್‌ರಾಜು ' ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ನಾಗಚೈತನ್ಯರೊಂದಿಗೆ ನಟಿ ದಕ್ಷ ನಗರ್ಕರ್ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ನಟ ನಾಗಚೈತನ್ಯ ಹಾಗೂ ಅವರ ತಂದೆ ನಾಗಾರ್ಜುನ ಮತ್ತೆ ಜೊತೆಯಾಗಿ ಪರದೆ ಹಂಚಿಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಇವರಿಬ್ಬರೂ ಡೇಟಿಂಗ್ ಮಾಡಲು ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು, ಈ ಗಾಳಿ ಸುದ್ದಿಗೆ ಪುರಾವೆ ಎಂಬಂತೆ ನಾಗಚೈತನ್ಯ ಹಾಗೂ ದಕ್ಷಾ ಜೊತೆಗಿರುವ ವೀಡಿಯೋವೊಂದು ನೆಟ್ಟಿಗರಿಗೆ ದೊರಕಿದೆ. ಅಂದಹಾಗೆ, ಈ ವಿಡಿಯೋ 'ಬಂಗಾರ್‌ರಾಜು' ಸಿನಿಮಾದ ಪ್ರಚಾರ ವೇದಿಕೆಯ ಮೇಲೆ ಸೆರೆಹಿಡಿದಿರುವುದು. ವೇದಿಕೆಯ ಮೇಲೆ ನಾಗಚೈತನ್ಯ ಮತ್ತು ದಕ್ಷಾ ಪ್ರಚಾರದಲ್ಲಿ ತೊಡಗಿದ್ದರೂ, ಅವರಿಬ್ಬರ ಹಾವ - ಭಾವವೇ ಸಿನಿಮಾಗಿಂತ ಹೆಚ್ಚು ನೆಟ್ಟಿಗರ ಗಮನ ಸೆಳೆಯುತ್ತಿದೆ. ವೇದಿಕೆಯ ಮೇಲೆ ಇದ್ದಷ್ಟು ಸಮಯ ನಾಗಚೈತನ್ಯ ಹಾಗೂ ದಕ್ಷ ಒಬ್ಬರನ್ನೊಬ್ಬರು ಗಮನಿಸುತ್ತಲೇ ನೋಡುತ್ತಲೇ ಇದ್ದರು. ಜೊತೆಗೆ ಒಮ್ಮೆ ನಟಿ ದಕ್ಷಾರನ್ನು ನೋಡಿ ನಾಗಚೈತನ್ಯ ಸ್ಟೈಲ್ ಮಾಡುತ್ತಾರೆ. ನಟಿಯ ಆ ಸುಂದರ ನಗುವನ್ನು ಕಂಡು ನಾಗಚೈತನ್ಯ ನಾಚಿ ನೀರಾಗುತ್ತಾರೆ. ಈ ವೀಡಿಯೋವೀಗ ನೆಟ್ಟಿಗರ ನಿದ್ದೆ ಗೆಡಿಸಿದೆ ಎನ್ನಬಹುದು.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಲವಾರು ಕಮೆಂಟ್ಸ್ ಗಳು ಕೇಳಿ ಬರುತ್ತಿವರ. ಕೆಲವರು 'ನಟ ನಾಗಚೈತನ್ಯ ಎಲ್ಲಾ ಗಂಡಸರಂತೆಯೇ' ಎಂದು ಪ್ರತಿಕ್ರಿಯೆ ನೀಡಿದರೆ. ಕೆಲವರು ನಟಿ ಸಮಂತಾರನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಹಲವರು 'ವಿಚ್ಛೇದನವಾಗಿ ಕೇವಲ ಮೂರೇ ತಿಂಗಳಿಗೆ ಹೊಸ ಲವ್ ಸ್ಟೋರಿ ಆರಂಭಿಸಿದ್ದಾರೆ ನಾಗಚೈತನ್ಯ' ಎಂದು ನಟನಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನುಳಿದ ನಟನ ಅಭಿಮಾನಿಗಳಂತೂ 'ಸುಂದರವಾದ ಟಾಲಿವುಡ್‌ನ ಹೊಸ ಜೋಡಿ' ಎಂದು ಹೊಗಳಲು ಆರಂಭಿಸಿದ್ದಾರೆ. ಸದ್ಯ ಈ ವೀಡಿಯೋ ಟಾಲಿವುಡ್‌ನ ಹಾಟ್ ಟಾಪಿಕ್ ಎಂದೇ ಹೇಳಬೇಕು.