
ತಾನು ನಿಮ್ಮ ಅಭಿಮಾನಿಯೆಂದ ಬಂದ ಮಹಿಳೆಗೆ ಶಾಕ್ ನೀಡಿದ ಕೇರಳದ ಪ್ರಖ್ಯಾತ ಯೂಟ್ಯೂಬರ್: ಆತ ಮಾಡಿದ್ದೇನು ಗೊತ್ತೇ?
Thursday, January 20, 2022
ಕೊಚ್ಚಿ: ಕೇರಳದ ಪ್ರಖ್ಯಾತ ಯೂಟ್ಯೂಬರ್ ಶ್ರೀಕಾಂತ್ ವೆಟ್ಟಿಯಾರ್ ಎಂಬಾತ ಮದುವೆಯಾಗುವೆನೆಂದು ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಮಹಿಳೆಯೋರ್ವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಆರೋಪಿ ಶ್ರೀಕಾಂತ್ ವೆಟ್ಟಿಯಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಶ್ರೀಕಾಂತ್ ವೆಟ್ಟಿಯಾರ್ ಹಿಟ್ ಚಲನಚಿತ್ರಗಳ ಸ್ಪೂಫ್ ವೀಡಿಯೊಗಳನ್ನು ಮಾಡುತ್ತಿದ್ದ. ರಾಜಕೀಯ ಬದ್ಧತೆ ಹಾಗೂ ಮಹಿಳಾ ಸಬಲೀಕರಣದ ವಿಚಾರಗಳ ಮೇಲೆ ಶ್ರೀಕಾಂತ್ ಮಾಡಿದ್ದ ವೀಡಿಯೋಗಳಿಂದ ಬಹಳ ಪ್ರಭಾವಿತಳಾಗಿದ್ದ ಮಹಿಳೆಯೋರ್ವರು ಈತನ ಅಭಿಮಾನಿ ಎಂದು ಹೇಳಿಕೊಂಡಿರುವ ಬಂದಿದ್ದರು. ಹೀಗೆ ಶ್ರೀಕಾಂತ್ ಗೆ ಮಹಿಳೆಯ ಪರಿಚಯವಾಗಿತ್ತು.
ಸಂತ್ರಸ್ತೆ ಮಹಿಳೆಗೆ ಮೊದಲೇ ಮದುವೆಯಾಗಿದ್ದು, 8 ವರ್ಷದ ಪುತ್ರ ಕೂಡ ಇದ್ದಾನೆ. ಮಹಿಳೆ ಕೊಚ್ಚಿಯಲ್ಲಿ ವಾಸವಿರುವ ವಾಸವಿರುವ ಸಂದರ್ಭ ಶ್ರೀಕಾಂತ್ ಪರಿಚಯವಾಗಿತ್ತು. ಹೀಗೆ ಇಬ್ಬರ ಮಧ್ಯೆ ಮಾತುಕತೆ ಇತ್ತು.
'2021ರ ಫೆಬ್ರವರಿಯಲ್ಲಿ ತನ್ನನ್ನು ಶ್ರೀಕಾಂತ್ ವೆಟ್ಟಿಯಾರ್ ಬರ್ತಡೇ ಪಾರ್ಟಿಗೆ ಆಹ್ವಾನಿಸಿದ್ದ. ಇದಾದ ಬಳಿಕ ಮದುವೆಯಾಗುವ ಭರವಸೆ ನೀಡಿ ಎರ್ನಾಕುಲಂ ಹಾಗೂ ಅಲುವಾದಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಕೊಚ್ಚಿಯ ಹೊಟೇಲ್ ರೂಮ್ ಒಂದರಲ್ಲೂ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಇದೀಗ ತಾನು ನೀಡಿರುವ ದೂರು ಹಿಂಪಡೆಯುವಂತೆ ತನ್ನ ಸ್ನೇಹಿತರನ್ನು ಹಿಂದೆ ಬಿಟ್ಟು ಶ್ರೀಕಾಂತ್ ನನ್ನ ಮನವೊಲಿಸುತ್ತಿದ್ದಾನೆಂದು ಮಹಿಳೆ ದೂರಿದ್ದಾರೆ. ಸದ್ಯ ಕೊಚ್ಚಿಯ ಠಾಣೆಯಲ್ಲಿ ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಶ್ರೀಕಾಂತ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.