
“ಹೂಂ ಅಂಟಾವಾ” ಹಾಡಿನ ಮೇಕಿಂಗ್ ವೀಡಿಯೋದಲ್ಲಿಯೇ ಬೋಲ್ಡ್ ಆಗಿ ಸೊಂಟ ಬಳುಕಿಸಿದ ನಟಿ ಸಮಂತಾ
Saturday, January 8, 2022
ಹೈದರಾಬಾದ್: ಸ್ಟಾರ್ ನಟ ಅಲ್ಲು ಅರ್ಜುನ್ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ “ಪುಷ್ಪ” ಬಾಕ್ಸ್ಆಫೀಸ್ನಲ್ಲಿ ಭಾರೀ ಸದ್ದು ಮಾಡಿದೆ. ಈ ಸಿನಿಮಾದ ಐಟಂ ಸಾಂಗ್ವೊಂದರಲ್ಲಿ ನಟಿ ಸಮಂತಾ ಕಾಣಿಸಿಕೊಂಡಿರುವುದು ಎಲ್ಲರಿಗೂ ತಿಳಿಯದಿರುವ ಸಂಗತಿಯೇನಲ್ಲ.
“ಹೂಂ ಅಂಟಾವಾ” ಎಂದು ಅವರು ಮೈಚಳಿ ಬಿಟ್ಟು ನರ್ತಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದರು. ತನ್ನ ವಿಭಿನ್ನ ಸಂಗೀತ ಹಾಗೂ ಸಾಹಿತ್ಯದಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಈ ಐಟಂ ಸಾಂಗ್ ವಿಶೇಷ ದಾಖಲೆಯನ್ನು ಬರೆದಿರುವುದಲ್ಲದೆ, ಆರಂಭದಲ್ಲಿ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಇನ್ನೊಂದು ವಿಚಾರವೆಂದರೆ ಇದೀಗ ನಟಿ ಸಮಂತಾ ಈ ಹಾಡಿನ ಮೇಕಿಂಗ್ ವೀಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
41 ಸೆಕೆಂಡ್ ನ ವಿಡಿಯೋದಲ್ಲಿ ಸಮಂತಾ ಸಹ ನರ್ತಕರೊಂದಿಗೆ ಮೈಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಸಿನಿಮಾಗಿಂತ ಡ್ಯಾನ್ಸ್ ರಿಹರ್ಸಲ್ನಲ್ಲೇ ಬಹಳ ಬೋಲ್ಡ್ ಆಗಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ. ಕೇವಲ ಶಾರ್ಟ್ ಹಾಗೂ ಟೈಟ್ ಫಿಟ್ಟಿಂಗ್ ಡ್ರೆಸ್ನಲ್ಲಿ ಸಮಂತಾ ಸೊಂಟ ಬಳುಕಿಸಿರುವುದನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಈ ವೀಡಿಯೋ ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜ.6ರಂದು ಬಿಡುಗಡೆಯಾಗಿರುವ ಈ ಹಾಡಿನ ವೀಡಿಯೋ ಈಗಾಗಲೇ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇನ್ನು ಈ ಹಾಡಿನ ವಿಶೇಷತೆಯೆಂದರೆ, ಸಾಂಗ್ ಬಿಡುಗಡೆಯಾದ ಹಲವು ದಿನಗಳವರೆಗೆ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು. ಅಲ್ಲದೆ, ಟಾಪ್ 100 ಗ್ಲೋಬಲ್ ಮ್ಯೂಸಿಕ್ ವೀಡಿಯೋದಲ್ಲಿ "ಹೂ ಅಂಟಾವ" ಹಾಡು ನಂಬರ್ 1 ಸ್ಥಾನದಲ್ಲಿದೆ. ಇದೊಂದೆ ಹಾಡಲ್ಲದೆ, ತೆಲುಗು ವರ್ಷನ್ ಶ್ರೀವಳ್ಳಿ ಸಾಂಗ್ 22ನೇ ಸ್ಥಾನ, ತಮಿಳು ವರ್ಷನ್ ಸಾಮಿ ಸಾಮಿ ಸಾಂಗ್ 25 ನೇ ಸ್ಥಾನ, ಹಿಂದಿ ವರ್ಷನ್ ಹೂ ಅಂಟಾವ ಸಾಂಗ್ 42ನೇ ಸ್ಥಾನ, ತೆಲುಗು ವರ್ಷನ್ ಸಾಮಿ ಸಾಮಿ ಸಾಂಗ್ 51ನೇ ಸ್ಥಾನ ಪಡೆದುಕೊಂಡು ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿದೆ.
"ಪುಷ್ಪ" ಸಿನಿಮಾದಲ್ಲಿ ಈ ಹಾಡಗೆ ದೇವಿ ಶ್ರೀ ಪ್ರಸಾದ್ ರಚಿಸಿದ್ದು, ಸಂಗೀತ ನೀಡಿದ್ದಾರೆ. ವಿವೇಕ ಮತ್ತು ಚಂದ್ರಬೋಸ್ ಬರೆದಿದ್ದಾರೆ. ಈ ಹಾಡಿನಲ್ಲಿ ”ಸೀರೆ ತೊಟ್ಟರು, ಶಾರ್ಟಸ್ ತೊಟ್ಟರು ಗಂಡಸರು ನೋಡುತ್ತಾರೆ. ಗಂಡಸರು ನಾಚಿಕೆ ಬಿಟ್ಟವರು” ಎಂಬ ಸಾಲುಗಳು ಹಾಡಿನ ಆರಂಭದಲ್ಲಿಯೇ ಕೇಳಿಬರುತ್ತದೆ. ಜೊತೆಗೆ, ಹಾಡಿನ ಕೋರಸ್ ಸಾಲುಗಳಲ್ಲಿ ಸಹ ”ಗಂಡಸರ ಬುದ್ಧಿಯೇ ನೀಚ” ಎಂಬ ಅರ್ಥವನ್ನು ಮೂರು ಬಾರಿ ಸಾರುತ್ತಿವೆ. ಸದ್ಯ, ಈ ಸಾಲುಗಳೇ ಹಲವು ಪುರುಷರ ಕೆಂಗಣ್ಣಿಗೆ ಗುರಿಯಾಗಿದೆ. ಹಾಡನ್ನು ಬ್ಯಾನ್ ಮಾಡಬೇಕೆಂಬ ಆಗ್ರಹಗಳು ಕೇಳಿಬಂದಿತ್ತು. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಐಟಂ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಇದಕ್ಕೆ ಬಾಲಿವುಡ್ ಜನಪ್ರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ.