
ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ: ಅಮ್ಮನಾಗುವ ನಟಿಗೆ ಅಭಿಮಾನಿಗಳಿಂದ ಶುಭಾಶಯ
Sunday, January 2, 2022
ಬೆಂಗಳೂರು: ಗಂಡ ಹೆಂಡತಿ ಸಿನಿಮಾ ನಟಿ ಸಂಜನಾ ಗಲ್ರಾನಿ ಬಾಳಿನಲ್ಲಿ ಹೊಸ ಕನಸು ಆರಂಭವಾಗಿದೆ. ಅಂದರೆ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂತೆ. ಸಂಜನಾ ಐದು ತಿಂಗಳ ಗರ್ಭಿಣಿಯಾಗಿರೋದನ್ನು ತಿಳಿದು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾ ಲೋಕದಲ್ಲಿ ಮಿಂಚಿರುವ ಸಂಜನಾ ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದರು. ಅಲ್ಲದೆ ಜನಪ್ರಿಯ ರಿಯಾಲಿಟಿ ಶೋಗಳಾದ ‘ಬಿಗ್ ಬಾಸ್ ಕನ್ನಡ’, ‘ಮುಜ್ಸೇ ಶಾದಿ ಕರೋಗೆ’ದಲ್ಲೂ ಪಾಲ್ಗೊಂಡು ಅಭಿಮಾನಿಗಳ ಮನ ಗೆದ್ದಿದ್ದರು.
ಕೊರೊನಾ ಸಂಕಷ್ಟದ ಕಾಲದಲ್ಲಿ ತಮ್ಮ ಫೌಂಡೇಶನ್ ಮೂಲಕ ಸಂಜನಾ ಗಲ್ರಾನಿ ಬಡವರಿಗೆ ಸಹಾಯ ಮಾಡಿದ್ದರು. ಅಲ್ಲದೆ ಪ್ರತಿಯೊಬ್ಬರ ಜೀವನದಲ್ಲಿ ದಿನನಿತ್ಯ ಯೋಗಾಭ್ಯಾಸ ಅನಿವಾರ್ಯ ಎಂದು ಹೇಳಿದ್ದರು. ಯೋಗ ಮಾಡುವಂತೆ ಯುವಜನತೆಗೆ ಪ್ರೋತ್ಸಾಹ ನೀಡಿದ್ದರು. ಸದ್ಯ ಸಂಜನಾ ಅಮ್ಮನಾಗುವ ಖುಷಿಯಲ್ಲಿ ಇದ್ದಾರೆ.