
ತಮ್ಮ ಬಿಕಿನಿ ಫೋಟೊದ ಹಿಂದಿರುವ ವಾಸ್ತವ ತಿಳಿಸಿದ ನಟಿ ಸಾರಾ ಅಲಿ ಖಾನ್
Wednesday, January 12, 2022
ಮುಂಬೈ: ನಟಿ ಸಾರಾ ಅಲಿ ಖಾನ್ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್ ಗೆ ಬೀಚ್‌ನಲ್ಲಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಥೋಬ್ಯಾಕ್ ಬೀಚ್ ಫೋಟೋಗಳನ್ನು ಒಂದು ಫನ್ನಿ ಕ್ಯಾಪ್ಷನ್‌ನೊಂದಿಗೆ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.
ಹೌದು, ಸೋಮವಾರ ನಟಿ ಸಾರಾ ಅಲಿ ಖಾನ್ ಬೀಚ್ ನಲ್ಲಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮೊದಲ ಫೋಟೋದಲ್ಲಿ ನಟಿ ನೀಲಿ ಬಿಕಿನಿಯಲ್ಲಿ ಸೊಗಸಾಗಿ ಪೋಸ್ ಕೊಟ್ಟಿರುವುದು ಕಂಡುಬಂದಿದೆ. ಅದಕ್ಕೆ ಅವರು 'ಇನ್‌ಸ್ಟಾಗ್ರಾಂನಲ್ಲಿ ಸೋಮವಾರ ಹೀಗಿರುತ್ತದೆ' ಎಂಬ ಕ್ಯಾಪ್ಟನ್ ಕೊಟ್ಟಿದ್ದಾರೆ. ಅದೇ ರೀತಿ ಎರಡನೇ ಫೋಟೋದಲ್ಲಿ ನಟಿ ಸಾರಾ ಕಪ್ಪು ಬಿಕಿನಿಯಲ್ಲಿ ಆಕಳಿಸುತ್ತಿರುವುದು ಕಂಡುಬಂದಿದೆ. ಈ ಫೋಟೋಗೆ ಅವರು 'ಇದು ಇನ್ ಸ್ಟಾಗ್ರಾಂ ಹಿಂದೆ ಇರುವ ಸೋಮವಾರದ ರಿಯಾಲಿಟಿ' ಎಂದು ಬರೆದುಕೊಂಡಿದ್ದಾರೆ .
ಈ ಮೂಲಕ ವಾಸ್ತವದಲ್ಲಿ ಸೋಮವಾರದಂದು ಬಿಕಿನಿ ಫೋಟೋ ಹಂಚಿಕೊಂಡರೂ ಅದು ಕೇವಲ ಇನ್‌ಸ್ಟಾಗ್ರಾಂ ನಲ್ಲಿಯೇ ಹೊರತು, ನಿಜವಾಗಿಯೂ ತಾನಿನ್ನು ನಿದ್ರಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸ್ಟಾರ್ ನಟ - ನಟಿಯರ ಫೋಟೋಗಳ ಹಿಂದಿನ ರಿಯಾಲಿಟಿ ಬೇರೆಯೇ ಇದೆ ಎಂಬುದು ಸಾಬೀತಾಗಿದೆ. ಈತನ್ಮಧ್ಯೆ ನಟಿ ಸಾರಾ ಅವರ ಇತ್ತೀಚಿನ ರಜೆದಿನಗಳ ಫೋಟೋಗಳು ಮತ್ತು ಈ ಬಿಕಿನಿ ಫೋಟೋಗಳು ಬಾರಿ ವೈರಲ್ ಆಗುತ್ತಿವೆ. ನಟಿಯ ಈ ಬಿಕಿನಿ ಫೋಟೋಗಳಿಗೆ 9 ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡಿದೆ.