
ಶಮನಿಶಂ ವಿದ್ಯೆ ಕಲಿಯಲು ಮನೆಬಿಟ್ಟು ಬಂದ ಅಪ್ರಾಪ್ತೆ ಮತ್ತೆ ಸುರಕ್ಷಿತವಾಗಿ ಮನೆಯವರ ಮಡಿಲಿಗೆ
Wednesday, January 19, 2022
ಬೆಂಗಳೂರು: ಶಮನಿಸಂ ಎಂಬ ಆತ್ಮಗಳ ಜತೆಯಲ್ಲಿ ಮಾತನಾಡುವ ವಿದ್ಯೆಯನ್ನು ಅರಿಯಬೇಕೆಂಬ ಬಯಕೆಯಿಂದ ಮನೆಬಿಟ್ಟು ನಾಪತ್ತೆಯಾದ ಬಾಲಕಿ ಬರೋಬ್ಬರಿ 78 ದಿನಗಳ ಬಳಿಕ ಪತ್ತೆಯಾಗಿದ್ದಾಳೆ.
ಶಮನಿಸಂ ಆಚರಣೆಯೆಡೆಗೆ ಸೆಳೆತಕ್ಕೊಳಗಾಗಿದ್ದ ಈ ಬಾಲಕಿ ಅಕ್ಟೋಬರ್ 31ರಂದು ಮನೆಬಿಟ್ಟು ನಾಪತ್ತೆಯಾಗಿದ್ದಳು. ಬರೋಬ್ಬರಿ 78 ದಿನಗಳ ಬಳಿಕ ಗುಜರಾತ್ನ ಸೂರತ್ನಲ್ಲಿ ಇದೀಗ ಆಕೆ ಪತ್ತೆಯಾಗಿದ್ದಾಳೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಈ ಅಪ್ರಾಪ್ತ ಬಾಲಕಿ, ಜನವರಿ 15ರಂದು ಸೂರತ್ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ. ಸುಬ್ರಹ್ಮಣ್ಯನಗರ ಪೊಲೀಸರು ಸದ್ಯ ಬಾಲಕಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
17 ವರ್ಷದ ಬಾಲಕಿ ಆತ್ಮಗಳ ಜೊತೆ ಮಾತಾಡೋದನ್ನು ಅಭ್ಯಾಸ ಮಾಡುತ್ತೇನೆಂದು ಅಕ್ಟೋಬರ್ 31ರಂದು ಮನೆಬಿಟ್ಟು ತೆರಳಿದ್ದಳು. ಈ ವೇಳೆ 2 ಜೊತೆ ಬಟ್ಟೆ ಹಾಗೂ 2500 ರೂ. ನಗದು ತೆಗೆದುಕೊಂಡು ಹೋಗಿದ್ದಳು. ಇದೀಗ ಆಕೆಯನ್ನು ಪೊಲೀಸರು ಮನೆಯವರಿಗೆ ಒಪ್ಪಿಸಿದ್ದಾರೆ.