
ಆನ್ ಲೈನ್ ನಲ್ಲಿ ವಾಚ್ ಆರ್ಡರ್ ಮಾಡಿರುವ ಗ್ರಾಹಕನಿಗೆ ಬಂದಿದ್ದು ಕಾಂಡೊಮ್: ಮರುಕ್ಷಣವೇ ಡೆಲಿವರಿ ಏಜೆಂಟ್ ಗಳಿಗೆ ಕಾದಿತ್ತು ಶಾಕ್
Tuesday, January 18, 2022
ಕೊಚ್ಚಿ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಬುಕ್ ಮಾಡಿರುವ ಪ್ರಾಡಕ್ಟ್ ಗಳಿಗೆ ಬದಲಾಗಿ ಬೇರೆ ವಸ್ತುಗಳು ಕೈ ಸೇರುವ ಸಾಕಷ್ಟು ಉದಾಹರಣೆಗಳ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಅಂಥಹದ್ದೇ ಮತ್ತೊಂದು ಪ್ರಕರಣವೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿ ಆನ್ಲೈನ್ಲ್ಲಿ ವಾಚ್ ಬುಕ್ ಮಾಡಿದ ಗ್ರಾಹಕನಿಗೆ ವಾಚ್ ಬದಲಾಗಿ ಕಾಂಡೊಮ್ ಡೆಲಿವರಿಯಾಗಿ ಶಾಕ್ ಕಾದಿತ್ತು. ಈ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಥಟ್ಟಂಪಾಡಿ ನಿವಾಸಿ ಅನಿಲ್ ಕುಮಾರ್ ಎಂಬುವರು ಪ್ರಮುಖ ಇ-ಕಾಮರ್ಸ್ ಸಂಸ್ಥೆಯಲ್ಲಿ 2,200 ರೂ. ಬೆಲೆಯ ವಾಚ್ ಅನ್ನು ಬುಕ್ ಮಾಡಿದ್ದರು. ಶನಿವಾರ ಮಧ್ಯಾಹ್ನ ಇಬ್ಬರು ಡೆಲಿವರಿ ಏಜೆಂಟ್ಗಳು ಅನಿಲ್ ಕುಮಾರ್ ಮನೆಗೆ ಬಂದು ವಾಚ್ ಡೆಲಿವರಿ ಮಾಡಿದ್ದಾರೆ.
ಆದರೆ, ಪ್ಯಾಕೆಟ್ ತೂಕ ಜಾಸ್ತಿ ಇರುವುದನ್ನು ಕಂಡು ಅನುಮಾನಗೊಂಡ ಅನಿಲ್, ತಕ್ಷಣ ಅದನ್ನು ತೆರೆದಿದ್ದಾರೆ. ಆದರೆ ಅದರಲ್ಲಿ ವಾಚ್ ಬದಲಾಗಿ ಕಾಂಡೋಮ್ ಹಾಗೂ ಜೊತೆಗಿನ್ನೊಂದಿಷ್ಟು ವಸ್ತುಗಳು ಕಂಡು ಬಂದಿದೆ. ಇದರಿಂದ ಅನಿಲ್ ಶಾಕ್ ಗೆ ಒಳಗಾಗಿದ್ದಾರೆ. ಇದಾದ ತಕ್ಷಣ ಡೆಲಿವರಿ ಏಜೆಂಟ್ಗಳನ್ನು ತಮ್ಮ ಮನೆಯ ಆವರಣದಲ್ಲಿಯೇ ತಡೆದ ಅನಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಇದು ಕಂಪೆನಿ ಮಾಡಿರುವ ಎಡವಟ್ಟೇ ಅಥವಾ ಸಂಚು ರೂಪಿಸಿ ಮಾಡಿರುವ ವಂಚನೆಯೇ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರು ಡಿಲಿವರಿ ಏಜೆಂಟ್ ಗಳು ಪೊಲೀಸ್ ವಶದಲ್ಲಿದ್ದಾರೆ.