
ಪ್ರಥಮ ರಾತ್ರಿಯಂದೇ ಭಾರೀ ಕನಸು ಹೊತ್ತು ಪತ್ನಿ ಬಳಿಗೆ ಬಂದಾತನಿಗೆ ಕಾದಿತ್ತು ಭಾರೀ ಶಾಕ್!: ವಧುವಿನ ಹೊಟ್ಟಿಯಲ್ಲಿತ್ತಂತೆ ಅವಳಿ ಮಕ್ಕಳು
Monday, January 3, 2022
ಮೀರತ್ (ಉತ್ತರ ಪ್ರದೇಶ): ವಿವಾಹವಾದ ಮೊದಲ ರಾತ್ರಿಯ ಬಗ್ಗೆ ಎಲ್ಲರೂ ಭಾರೀ ಕನಸುಗಳನ್ನು ಹೊತ್ತಿರುತ್ತಾರೆ. ಆದರೆ ಅಂದು ಪತ್ನಿಯ ಸಮೀಪ ಬಂದಾಗ ಆಕೆ ಮೊದಲೇ ಗರ್ಭಿಣಿ ಎಂಬ ವಿಚಾರ ತಿಳಿದಾಗ ಆ ಪತಿ ಮಹಾಶಯನ ಸ್ಥಿತಿ ಹೇಗಿರಬೇಡ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಇದೀಗ ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮೀರತ್‌ನ ಯುವಕನಿಗೆ ಪಕ್ಕದ ಊರಿನ ಯುವತಿಯೊಂದಿಗೆ ವಿವಾಹ ನೆರವೇರಿತ್ತು. ಆದರೆ ಅದಾಗಲೇ ಆಕೆಗೆ ಬೇರೊಬ್ಬನೊಂದಿಗೆ ಪ್ರೀತಿಯಿದ್ದು, ಈ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ಆದ್ದರಿಂದ ಅವರು ಬೇರೊಬ್ಬ ಯುವಕನನ್ನು ಗೊತ್ತುಮಾಡಿ ಆಕೆಗೆ ತಕ್ಕಮಟ್ಟಿಗೆ ವಿವಾಹ ಮಾಡಿದ್ದರು. ಅಲ್ಲಿಯವರೆಗೂ ಯುವತಿ ಆಕೆಯ ಪ್ರೀತಿಯ ವಿಚಾರವನ್ನು ಆಕೆ ಯಾರಲ್ಲೂ ಬಾಯಿ ಬಿಟ್ಟಿರಲಿಲ್ಲ.
ವಿವಾಹವಾದ ಒಂದು ವಾರದ ಬಳಿಕ ಮೊದಲ ರಾತ್ರಿಯ ಸಂಭ್ರಮ ಮನೆ ಮಾಡಿತ್ತು. ಮದುಮಗನೂ ಪ್ರಥಮ ರಾತ್ರಿಯ ಬಗ್ಗೆ ಹಲವಾರು ಕನಸುಗಳನ್ನು ಹೊತ್ತು ತನ್ನ ಮಡದಿ ಬಳಿಗೆ ಹೋಗಿದ್ದಾನೆ. ಇನ್ನೇನು ಆತ ಅವಳ ಬಳಿ ಹೋಗುತ್ತಿದ್ದಂತೆಯೇ ಯುವತಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ರಾಜು ಹಾಗೂ ಆತನ ಕುಟುಂಬಸ್ಥರು ವೈದ್ಯರ ಬಳಿ ನವವಧುವನ್ನು ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ಮಾಡಿದ ವೈದ್ಯರು ಆಕೆ ಐದು ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ. ಇದರಿಂದ ರಾಜು ಹಾಗೂ ಆತನ ಪಾಲಕರು ಗಾಬರಿ ಬಿದ್ದಿದ್ದಾರೆ.
ಅಷ್ಟರಲ್ಲೇ ಯುವತಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭ ಎರಡೂ ಕುಟುಂಬದವರ ನಡುವೆ ವಾಗ್ವಾದ ನಡೆದಿದೆ. 'ಗರ್ಭಿಣಿಗೆ ಮದುವೆಮಾಡಿ ತಮಗೆ ಮೋಸ ಮಾಡಿದ್ದೀರಿ' ಎಂದು ರಾಜು ಕುಟುಂಬದವರು ಆರೋಪಿಸಿದ್ದಾರೆ. 'ತಮ್ಮ ಮಗಳಿಗೆ ನೀವೇ ಏನೋ ಮಾಡಿದ್ದೀರಿ, ಅದಕ್ಕಾಗಿಯೇ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ' ಎಂದು ಯುವತಿ ಕುಟುಂಬ ಮದುಮಗನ ಕುಟುಂಬಿಕರಿಗೆ ಆವಾಜ್ ಹಾಕಿದ್ದಾರೆ.
'ಅದಾಗಲೇ ಮದುವೆಯಾಗಿ ಒಂದು ವಾರವಾಗಿದ್ದು, ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ. ಆಕೆಗೆ ಯಾರ ಜೊತೆಗೂ ಸಂಬಂಧವಿಲ್ಲ. ಇನ್ನು ಗರ್ಭಿಣಿಯಾಗುವುದು ಹೇಗೆ? ತಮ್ಮ ಮಗಳಿಗೆ ನೀವೇ ಏನೋ ಮಾಡಿದ್ದೀರಿ' ಎಂದು ಯುವತಿ ಕುಟುಂಬವು ಆಕೆಯ ಪತಿಯ ಮನೆಯವರ ವಿರುದ್ಧವೇ ಕೇಸ್ ಹಾಕುವ ತಯಾರಿ ನಡೆಸಿದ್ದಾರೆ. ಇಷ್ಟೆಲ್ಲಾ ಆಗುವ ವೇಳೆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಆಕೆ ಮಾತ್ರ ಎಲ್ಲೂ ತಾನು ಗರ್ಭಿಣಿಯೆಂಬ ವಿಚಾರವನ್ನು ಹೆತ್ತವರಲ್ಲಿ ಬಾಯಿಬಿಟ್ಟಿರಲಿಲ್ಲ.
ಯುವತಿ ಕುಟುಂಬ ತಮ್ಮ ಮೇಲೆ ಪ್ರಕರಣ ದಾಖಲಿಸಲು ತಯಾರಿ ನಡೆಸುತ್ತಿದ್ದಂತೆಯೇ ಗಾಬರಿಗೊಂಡ ಯುವಕನ ಕುಟುಂಬವು ತಾವೇ ಮೊದಲಾಗಿ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಯುವತಿಯ ಬಾಯಿ ಬಿಡಿಸಿದಾಗ ತನಗೆ ಬೇರೊಬ್ಬ ಯುವಕನ ಜೊತೆಗೆ ಸಂಬಂಧವಿದ್ದು, ತಾನು ಐದು ತಿಂಗಳ ಗರ್ಭಿಣಿ ಎಂದು ಒಪ್ಪಿಕೊಂಡಿದ್ದಾಳೆ. ತನ್ನ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇರುವ ಬಗ್ಗೆಯೂ ಹೇಳಿದ್ದಾಳೆ. ಈ ಬಗ್ಗೆ ತನ್ನ ಪಾಲಕರಿಗೆ ಹೇಳಿದರೆ ಮಗುವನ್ನು ಎಲ್ಲಿ ತೆಗೆಸಿಬಿಡುತ್ತಾರೋ, ನನ್ನ ಪ್ರಿಯಕರಿಗೆ ಏನಾದರೂ ಹೆಚ್ಚೂ ಕಡಿಮೆ ಮಾಡಿಬಿಡುತ್ತಾರೋ ಎಂದು ಬಾಯಿಬಿಟ್ಟಿರಲಿಲ್ಲ. ಮದುವೆಯಾದ ಮೇಲೆ ಪತಿಗೆ ಎಲ್ಲಾ ವಿಚಾರ ತಿಳಿಸಿ ಪ್ರಿಯಕರನ ಜತೆಗೆ ವಾಪಸ್ ಹೋಗೋಣ ಎಂದುಕೊಂಡಿದ್ದೆ. ಆದರೆ ಇಷ್ಟೆಲ್ಲಾ ರಾದ್ಧಾಂತ ಆಗಿಹೋಯಿತು ಎಂದು ಹೇಳಿದ್ದಾಳೆ.