
ಪ್ರೀತಿಸಿದ ಹುಡುಗನೊಂದಿಗೆ ಸರಳವಾಗಿ ವಿವಾಹವಾದ ಸ್ಯಾಂಡಲ್ ವುಡ್ ಬೆಡಗಿ ಶುಭಾ ಪೂಂಜಾ
Wednesday, January 5, 2022
ಬೆಂಗಳೂರು: ಸ್ಯಾಂಡಲ್ವುಡ್ ಬೆಡಗಿ ಶುಭಾ ಪೂಂಜಾ ತಮ್ಮ ಪ್ರೀತಿಯ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಂತ್ ಮಹಾಬಲ ಹಾಗೂ ಶುಭಾ ಪೂಂಜಾ ಸರಳವಾಗಿ ವಿವಾಹವಾಗಿದ್ದು, ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋವೊಂದನ್ನು ಹಂಚಿಕೊಡಿರುವ ಶುಭಾ ಪೂಂಜಾ, ‘ಇಂದು ನಾನು ಹಾಗೂ ಸುಮಂತ್ ಮಹಾಬಲ ಇಬ್ಬರೂ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಮಜಲಬೆಟ್ಟು ಬೀಡುವಿನಲ್ಲಿ ಸರಳವಾಗಿ ಮದುವೆಯಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆ ನಮ್ಮ ಮೇಲಿರಲಿ’ ಎಂದು ಬರೆದುಕೊಂಡಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು, ಚಿತ್ರರಂಗದವರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಮಂಗಳೂರು ಮೂಲದ ಶುಭಾ ಪೂಂಜಾ ಮದುವೆಯಾಗಿರುವ ಸುಮಂತ್ ಮಹಾಬಲ ಕೂಡ ಮಂಗಳೂರಿನವರೇ ಆಗಿದ್ದು, ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್ ಉಪಾಧ್ಯಕ್ಷರಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮವನ್ನೂ ನಡೆಸುತ್ತಿದ್ದಾರೆ. ಒಂದೂವರೆ ವರ್ಷಗಳಿಂದ ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಇವರಿಬ್ಬರ ಪ್ರೀತಿಗೆ ಮನೆಯವರಿಂದ ಕಳೆದ ವರ್ಷವೇ ಗ್ರೀನ್ ಸಿಗ್ನಲ್ ಹೊರಕಿತ್ತು. ಇದೀಗ ಇಬ್ಬರೂ ಹಸೆಮಣೆ ಏರಿದ್ದಾರೆ.