
ಮದುವೆಯಾಗುವುದಾಗಿ ವಂಚಿಸಿದ ಕಾನ್ ಸ್ಟೇಬಲ್: ತಿ.ನರಸೀಪುರ ಠಾಣೆಯ ಮುಂಭಾಗವೇ ಧರಣಿ ಕುಳಿತ ಸಂತ್ರಸ್ತ ಯುವತಿ
Sunday, January 30, 2022
ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಪೊಲೀಸ್ ಕಾನ್ ಸ್ಟೇಬಲ್ ವಂಚನೆ ಮಾಡಿರುವುದಾಗಿ ಆರೋಪಿಸಿ ಯುವತಿಯಳರ್ವಳು ನ್ಯಾಯಕ್ಕಾಗಿ ತಿ.ನರಸೀಪುರ ಪೋಲೀಸ್ ಠಾಣೆಯ ಮುಂಭಾಗವೇ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾಳೆ.
ತಿ.ನರಸೀಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ ಸ್ಟೇಬಲ್ ರವಿ ವಿರುದ್ಧ ಆರೋಪ ಕೇಳಿಬಂದಿದೆ. ಅನ್ಯಾಯಕ್ಕೆ ಒಳಗಾಗಿರುವ ಯುವತಿ ಬೆಂಗಳೂರಿನ ನಿವಾಸಿಯಾಗಿದ್ದು, ಇದೀಗ ನ್ಯಾಯಕ್ಕೆ ಆಗ್ರಹಿಸಿ ಆಕೆ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾಳೆ.
2018ರಲ್ಲಿ ಈಕೆಗೆ ಪೊಲೀಸ್ ಕಾನ್ ಸ್ಟೇಬಲ್ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಾನೆ. ಇಬ್ಬರ ನಡುವೆ ಸ್ನೇಹ ಆರಂಭವಾಗಿದೆ. ಬಳಿಕ ಸ್ನೇಹವು ಪ್ರೇಮಕ್ಕೆ ತಿರುಗಿದೆ. ಆ ನಂತರ ಆತ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ತನ್ನನ್ನು ಬಳಸಿಕೊಂಡಿದ್ದಾನೆಂದು ಸಂತ್ರಸ್ತ ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ಇದೀಗ ನ್ಯಾಯಕ್ಕಾಗಿ ತಿ.ನರಸೀಪುರ ಪೋಲೀಸ್ ಠಾಣೆಯ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾಳೆ. ವಂಚನೆ ಸಂಬಂಧ ಯುವತಿ ಈಗಾಗಲೇ ದೂರು ಸಹ ನೀಡಿದ್ದಾಳೆ.