
ಲಿಂಗತ್ವ ಸಾಬೀತಿಗೆ ತೃತೀಯ ಲಿಂಗಗಳನ್ನು ವಿವಸ್ತ್ರಗೊಳಿಸಿದ ಪೊಲೀಸರು: ಒಳ ಉಡುಪು, ವಿಗ್ ಠಾಣೆಯಲ್ಲಿಸಿ ದೌರ್ಜನ್ಯ; ಆರೋಪ
Thursday, January 13, 2022
ತ್ರಿಪುರ: ಪೊಲೀಸರು ತೃತೀಯ ಲಿಂಗಿಯರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಮೆರೆದಿದ್ದಾರೆಂಬ ದೂರೊಂದು ತ್ರಿಪುರದಲ್ಲಿ ಕೇಳಿ ಬಂದಿದೆ. ಈ ಬಗ್ಗೆ ತೃತೀಯ ಲಿಂಗಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ.
'ಪೊಲೀಸರು ನಮ್ಮನ್ನು ಬಂಧಿಸಿ, ಲಿಂಗತ್ವ ಸಾಬೀತುಪಡಿಸಿಕೊಳ್ಳಬೇಕೆಂದು ವಿವಸ್ತ್ರಗೊಳಿಸಿದ್ದಾರೆ' ಎಂದು ಅಳಲು ತೋಡಿಕೊಂಡಿದ್ದಾರೆ. ‘ರಾತ್ರಿ ಹೊಟೇಲ್‌ವೊಂದರಲ್ಲಿ ಪಾರ್ಟಿ ಮುಗಿಸಿ ನಮ್ಮ ಸಮುದಾಯದ ನಾಲ್ವರು ತೃತೀಯ ಲಿಂಗಿಗಳು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅಷ್ಟಲ್ಲದೆ ಅವರ ಮೇಲೆ ಸುಲಿಗೆ ಆರೋಪ ಹೊರಿಸಿದ್ದಾರೆ. ಬಳಿಕ ಪಶ್ಚಿಮ ಅಗರ್ತಲಾ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ಅವರು ಲಿಂಗತ್ವವನ್ನು ಸಾಬೀತುಪಡಿಸಬೇಕೆಂದು ಎಂದು ಆವಾಜ್ ಹಾಕಿದ್ದಾರೆ' ಎಂದು ತೃತೀಯ ಲಿಂಗಿಗಳು ದೂರಿದ್ದಾರೆ.
ಅವರು ಪೊಲೀಸರಲ್ಲಿ ತಾವು ತೃತೀಯ ಲಿಂಗಿಯರೆಂದು ಹೇಳಿದರೂ ಯಾವ ಮಾತನ್ನೂ ಕೇಳಲಿಲ್ಲ. ಅಲ್ಲಿದ್ದ ಪುರುಷ ಹಾಗಯ ಮಹಿಳಾ ಪೊಲೀಸ್ ಅಧಿಕಾರಿಗಳು ಆ ನಾಲ್ವರನ್ನು ವಿವಸ್ತ್ರಗೊಳಿಸಿದ್ದಾರೆ ಎಂದು ಅವರು ನೋವು ತೋಡಿಕೊಂಡರು.
ವಿಚಿತ್ರವೆಂದರೆ ಕೇವಲ ಪುರುಷ ಪೊಲೀಸರಲ್ಲದೇ, ಮಹಿಳಾ ಪೊಲೀಸರೂ ಇವರ ಬಟ್ಟೆ ಬಿಚ್ಚಿಸಿದ್ದಾರೆ. ಸಾಲದು ಎಂಬುದಕ್ಕೆ ಅವರ ವಿಗ್ ಹಾಗೂ ಒಳ ಉಡುಪುಗಳನ್ನು ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡಿದ್ದಾರೆ. ಇದೀಗ ತಮಗಾಗಿರುವ ದೌರ್ಜನ್ಯಕ್ಕೆ ನ್ಯಾಯ ಬೇಕೆಂದು ಸಂತ್ರಸ್ತ ತೃತೀಯ ಲಿಂಗಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
'ತಮ್ಮ ವಿರುದ್ಧ ಏನೂ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಮ್ಮ ಮೆ ದೌರ್ಜನ್ಯ ಎಸಗಲಾಗಿದೆ. ನಮಗೆ ನ್ಯಾಯ ಕೊಡಿಸಿ' ಎಂದು ಅವರು ಕೋರಿದ್ದಾರೆ. ಸುಪ್ರೀಂ ಕೋರ್ಟ್‌ನ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನೀಡಿರುವ ತೀರ್ಪಿನ ವಿರುದ್ಧ ತೃತೀಯಲಿಂಗಿ ಸಮುದಾಯದ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಲಾಗಿದೆ.
ಈ ಕಾನೂನಿನನ್ವಯ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕೆಂದು ಅವರು ಕೋರಿದ್ದಾರೆ. ಐಪಿಸಿ ಸೆಕ್ಷನ್ 151ರಡಿ (ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಗೆ ಭಂಗವುಂಟುಮಾಡುವುದು) ಈ ನಾಲ್ವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.