
ಪ್ಯಾಂಟ್ ಧರಿಸಿದ, ಸರಿಯಾಗಿ ಟಾಪ್ ತೊಡದ ಬಾಲಿವುಡ್ ನಟಿಯರಿಬ್ಬರು ಹಿಗ್ಗಾಮುಗ್ಗಾ ಟ್ರೋಲ್
Friday, January 28, 2022
ಮುಂಬೈ: ಸಿನಿಮಾ ನಟಿಯರು ಕೆಲವೊಮ್ಮೆ ಕ್ಯಾಮೆರಾ ಕಣ್ಣಿಗೆ ಬೀಳುವಾಗ ವಿಭಿನ್ನ ಬಟ್ಟೆ ಧರಿಸಿ ಪ್ರತ್ಯಕ್ಷವಾಗುತ್ತಿರುತ್ತಾರೆ. ಹೀಗೆ, ಕೆಲವೊಮ್ಮೆ ವಿಚಿತ್ರ ಉಡುಪುಗಳನ್ನು ಧರಿಸಿ ಟ್ರೋಲ್ ಸಹ ಆಗುತ್ತಾರೆ. ಅದರಲ್ಲೂ ಸ್ಟಾರ್ ನಟಿಯರ ಕಾಸ್ಟ್ಯೂಂಗಳ ಬಗ್ಗೆ ನೆಟ್ಟಿಗರು ಹೆಚ್ಚಾಗಿ ಮಾಡುತ್ತಿರುತ್ತಾರೆ. ಇದೀಗ ನಟಿ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಇದೇ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಹೌದು, ತಮ್ಮ ಹೊಸ ಸಿನಿಮಾ 'ಗೆಹ್ರಿಯಾನ್' ಪ್ರಚಾರದಲ್ಲಿ ಬ್ಯುಸಿಯಾಗಿರುವ ಅವರಿಬ್ಬರೂ ಒಂದು ಪ್ರಮೋಷನಲ್ ಕಾರ್ಯಕ್ರದಲ್ಲಿ ವಿಚಿತ್ರ ಬಟ್ಟೆಗಳನ್ನು ತೊಟ್ಟಿದ್ದರು. ನಟಿ ದೀಪಿಕಾ ಪಡುಕೋಣೆ ಕಪ್ಪು - ಬಿಳಿ ಬಣ್ಣದ ಜೀಬ್ರಾ ಪ್ರಿಂಟ್‌ನ ಕೋಟ್ ಧರಿಸಿ , ಲೆಂಥಿ ಬೂಟ್‌ಗಳನ್ನು ಹಾಕಿಕೊಂಡು ಕಾಣಿಸಿಕೊಂಡಿದ್ದರು. ಸದ್ಯ ದೀಪಿಕಾ ಪಡುಕೋಣೆ ಈ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದು ಬಟ್ಟೆಯೇ ಅಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ದೀಪಿಕಾ ಒಂದು ಶಾರ್ಟ್ಸ್ ಅಥವಾ ಪ್ಯಾಂಟ್ ಧರಿಸಿಲ್ಲ, ಅವರು ಪ್ಯಾಂಟ್ ಮರೆತಿದ್ದಾರೆ ಎಂಬ ಕಾಮೆಂಟ್‌ಗಳ ಸುರಿಮಳೆಯೇ ಆಗಿದೆ.
ಇನ್ನು , ಕೆಲವು ಬುದ್ಧಿವಂತ ನೆಟ್ಟಿಗರು ದೀಪಿಕಾ ತಮ್ಮ ಪತಿ ರಣವೀರ್ ಸಿಂಗ್ ಬಟ್ಟೆ ತೊಟ್ಟಿದ್ದಾರೆಂದು ಟ್ರೋಲ್ ಮಾಡಲು ಆರಂಭಿಸಿದ್ದಾರೆ . ಮತ್ತೊಂದೆಡೆ, ನಟಿ ಅನನ್ಯಾ ಪಾಂಡೆ 'ಗೆಹ್ರಿಯಾನ್' ಪ್ರಚಾರದಲ್ಲಿ ಕೊಂಚ ಹೆಚ್ಚಾಗಿಯೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಹೋಗಿ ಪ್ಯಾಂಟ್ ಹಾಗೂ ಟ್ಯೂಬ್ ಟಾಪ್ ಧರಿಸಿ ಪರದಾಡುತ್ತಿದ್ದರು.
ಅವರಿದ್ದ ಜಾಗದಲ್ಲಿ ಬಹಳ ಗಾಳಿಯಿದ್ದ ಕಾರಣ ಅವರು ತೊಟ್ಟ ಉಡುಗೆ ಕಂಫರ್ಟ್ ಆಗಿರಲಿಲ್ಲ. ಅಲ್ಲದೆ ಅವರು ಚಳಿಯಿಂದ ನಡುಗುತ್ತಿದ್ದರು. ಬಳಿಕ ಈ ಸಿನಿಮಾ ನಾಯಕ ನಟ ಸಿದ್ಧಾಂತ್ ಚತುರ್ವೇದಿ ಅವರು ತಮ್ಮ ಕೋಟ್ ಬಿಚ್ಚಿ ನಟಿಗೆ ಕೊಟ್ಟಿದ್ದಾರೆ. ಹಾಗಾಗಿ ಅನನ್ಯಾ ಪಾಂಡೆ ಸದ್ಯ ಸಖತ್ ಟ್ರೋಲ್ ಆಗಿದ್ದಾರೆ. ಈ ನಟಿಯರಿಗೆ ಸರಿಯಾಗಿ ಬಟ್ಟೆ ತೊಡಲು ತಿಳಿದಿರುದಿಲ್ಲ ಎಂದು ನೆಟ್ಟಿಗರು ಅವರ ಫೋಟೋಗಳು, ವೀಡಿಯೋಗಳನ್ನು ಬಳಸಿ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.