-->
ಮೂವರು ತನ್ನ ಮೇಲೆ ಅತ್ಯಾಚಾರ ಎಸಗಲಾಗಿದ್ದಾರೆಂದ 16ರ ವಿದ್ಯಾರ್ಥಿನಿ: ಆಕೆಯ ಮೇಲೆ ಪ್ರಕರಣ ದಾಖಲಿಸಲು ಪೊಲೀಸ್ ಸಿದ್ಧತೆ ನಡೆಸಿದ್ದೇಕೆ?

ಮೂವರು ತನ್ನ ಮೇಲೆ ಅತ್ಯಾಚಾರ ಎಸಗಲಾಗಿದ್ದಾರೆಂದ 16ರ ವಿದ್ಯಾರ್ಥಿನಿ: ಆಕೆಯ ಮೇಲೆ ಪ್ರಕರಣ ದಾಖಲಿಸಲು ಪೊಲೀಸ್ ಸಿದ್ಧತೆ ನಡೆಸಿದ್ದೇಕೆ?

ದಾವಣಗೆರೆ: ಡಿಪ್ಲೊಮಾ ವಿದ್ಯಾರ್ಥಿನಿಯೋರ್ವಳು ಮಾಜಿ ಪ್ರಿಯಕರನನ್ನು ಭೇಟಿ ಮಾಡಬೇಕೆಂದು ‘ಮೂವರು ಅಪಹರಣ ಮಾಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಸುಳ್ಳು ಕಥೆ ಕಟ್ಟಿ ದೂರು ನೀಡಿದ್ದಳು. ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಭೇದಿಸಿರುವ ಪೊಲೀಸರು, ವ್ಯವಸ್ಥೆಯನ್ನೇ ದುರುಪಯೋಗ ಮಾಡಿಕೊಂಡಿರುವ ವಿದ್ಯಾರ್ಥಿನಿ ವಿರುದ್ಧವೇ ದೂರು ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಶಿವಮೊಗ್ಗ ಮೂಲದ 16 ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿಯೊಬ್ಬಳು ನಗರದ ಹಾಸ್ಟೆಲ್‌ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ತನ್ನನ್ನು ಅಪಹರಣಗೈದ ಮೂವರು ಹೊನ್ನಾಳಿಯ ತುಂಗಭದ್ರಾ ನದಿಯ ಸಮೀಪ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ಕುಟುಂಬದವರೊಂದಿಗೆ ಬಂದು ಸೋಮವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದಳು. ವಿದ್ಯಾರ್ಥಿನಿ ಪರಿಶಿಷ್ಟ ಪಂಗಡಕ್ಕೆ ಸೇರಿದವಳಾಗಿದ್ದರಿಂದ ಸಾಮೂಹಿಕ ಅತ್ಯಾಚಾರದ ದೂರು ಪೊಲೀಸರನ್ನು ಬೆಚ್ಚಿಬೇಳಿಸಿತ್ತು. 

ವಿದ್ಯಾರ್ಥಿನಿ ದೂರು ನೀಡಿದ ತಕ್ಷಣವೇ ಎಸ್ಪಿ ಸಿ.ಬಿ.ರಿಷ್ಯಂತ್‌ ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಪೊಲೀಸರ ಹಲವು ತಂಡಗಳನ್ನು ರಚಿಸಿ ತನಿಖೆ ಆರಂಭಿಸಲಾಗಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ವಿದ್ಯಾರ್ಥಿನಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರುವ ಯಾವು ಕುರುಹುಗಳು ಕಂಡು ಬಂದಿಲ್ಲ. ಇದರಿಂದ ಸಂದೇಹಗೊಂಡ ಪೊಲೀಸರು ಆಕೆಯನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ನಕಲಿ ಅತ್ಯಾಚಾರದ ವಿಚಾರ ಬಹಿರಂಗಗೊಂಡಿದೆ. 

ಈ ವಿದ್ಯಾರ್ಥಿನಿಯು ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹೊನ್ನಾಳಿಯ ಯುವಕನೊಬ್ಬನ ಪರಿಚಯವಾಗಿತ್ತು. ಆತನೊಂದಿಗೆ ಕೆಲ ದಿನಗಳ ಕಾಲ ನಗರದಲ್ಲಿ ಸುತ್ತಾಡಿದ್ದಳು. ಆದರೆ ಇತ್ತೀಚೆಗೆ ಆತ ತನ್ನ ಫೋನ್‌ ಕರೆಗಳನ್ನು ಸ್ವೀಕರಿಸುತ್ತಿಲ್ಲ, ಭೇಟಿಯನ್ನೂ ಮಾಡುತ್ತಿಲ್ಲ ಎಂಬುದು ಆಕೆಯನ್ನು ಚಿಂತೆಗೀಡು ಮಾಡಿತ್ತು. ಹೀಗಾಗಿ ಸೋಮವಾರ ಮಧ್ಯಾಹ್ನ ಆಕೆ ಹೊನ್ನಾಳಿಗೆ ಹೋಗಿದ್ದಾಳೆ. ತುಂಗಭದ್ರಾ ನದಿಯ ಬಳಿ ಬಟ್ಟೆ ತೊಳೆಯುತ್ತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್‌ ತೆಗೆದುಕೊಂಡು, ‘ನಿನ್ನ ಹುಡುಗಿಯನ್ನು ಅಪಹರಣ ಮಾಡಿದ್ದೇವೆ. ನೀನು ಇಲ್ಲಿಗೆ ಬಾರದೇ ಇದ್ದರೆ ಅವಳನ್ನು ಸಾಯಿಸುತ್ತೇವೆ’ ಎಂದು ಮಾಜಿ ಪ್ರಿಯಕರನ ಮೊಬೈಲ್‌ಗೆ ಮೆಸೇಜ್‌ ಮಾಡಿದ್ದಾಳೆ. ಆದರೆ, ಆತ ಅದಕ್ಕೂ ಸ್ಪಂದಿಸಿಲ್ಲ, ಸ್ಥಳಕ್ಕೂ ಬಂದಿರಲಿಲ್ಲ. 

ದಿನವಿಡೀ ವಿದ್ಯಾರ್ಥಿನಿ ಮೊಬೈಲ್‌ ಏಕೆ ಬಂದಾಗಿದೆ ಎಂದು ಸಂಜೆ ಪೋಷಕರು ಆಕೆಗೆ ಕರೆ ಮಾಡಿ ವಿಚಾರಣೆ ನಡೆಸಿದಾಗ 'ಅಪಹರಣ ಮಾಡಿ ತನ್ನ ಮೇಲೆ ಅತ್ಯಾಚಾರ ನಡೆಸಿರುವ' ಸುಳ್ಳು ಕಥೆ ಹೇಳಿದ್ದಳು. 

ಪೊಲೀಸ್‌ ತಂಡವು ಹೊನ್ನಾಳಿಗೆ ಹೋಗಿ ವಿಚಾರಣೆ ನಡೆಸಿದ ಸಂದರ್ಭ ವಿದ್ಯಾರ್ಥಿನಿಯು ಬಟ್ಟೆ ತೊಳೆಯುವ ವ್ಯಕ್ತಿಯ ಮೊಬೈಲ್‌ ಪಡೆದು ಪ್ರಿಯಕರನಿಗೆ ಮೆಸೇಜ್‌ ಕಳುಹಿಸಿರುವುದು ಬೆಳಕಿಗೆ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಮಂಗಳವಾರ ಬೆಳಗ್ಗಿನ ಜಾವದವರೆಗೂ ನಿದ್ದೆಗೆಟ್ಟು ಆರೋಪಿಗಳಿಗಾಗಿ ಹುಡುಕಾಟ ನಡೆಸಿತ್ತು. ವಿದ್ಯಾರ್ಥಿನಿ ನೀಡಿರುವ ಸುಳ್ಳು ದೂರಿನ ಬಗ್ಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಲಾಗುವುದು. ಜೊತೆಗೆ ಸುಳ್ಳು ದೂರು ನೀಡಿ ಪೊಲೀಸರ ಸಮಯವನ್ನು ಹಾಳು ಮಾಡಿರುವ ವಿದ್ಯಾರ್ಥಿನಿಯ ಮೇಲೆ ದೂರು ದಾಖಲಿಸಿಕೊಳ್ಳಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿಕೊಳ್ಳಲಾಗುವುದು ಎಂದು ತಿಳಿಸಿದರು ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article