
ತನ್ನದೇ ಮನೆಯ ಆವರಣವಿಲ್ಲದ ಬಾವಿಯಲ್ಲಿ ಯುವತಿ ಮೃತದೇಹವಾಗಿ ಪತ್ತೆ!
Friday, February 11, 2022
ತ್ರಿಶ್ಶೂರ್: ಯುವತಿಯೋರ್ವಳು ತನ್ನದೇ ಮನೆಯ ಆವರಣದಲ್ಲಿರುವ ಬಾವಿಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶ್ಶೂರಿನಲ್ಲಿ ನಡೆದಿದೆ.
ಇರಿಂಜಲಕುಡ ಮೂಲದ ನಿವಾಸಿಗಳಾದ ಜ್ಯೋತಿ ಪ್ರಕಾಶ್ ಮತ್ತು ರಜಿತಾ ದಂಪತಿ ಪುತ್ರಿ ಶಾಂತವನ (19) ಮೃತಪಟ್ಟ ಯುವತಿ.
ಶಾಂತವನ ಕೊಡುಂಗಲ್ಲೂರಿನ ಕೆಕೆಟಿಎಂ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿನಿಯಾಗಿದ್ದಳು. ಶಾಂತವನ ತನ್ನ ಮನೆಯ ಆವರಣದಲ್ಲಿರುವ ಬಾವಿಯೊಳಗೆ ಗುರುವಾರ ರಾತ್ರಿ 11.30ರ ಸುಮಾರಿಗೆ ಮೃತದೇಹವಾಗಿ ಪತ್ತೆಯಾಗಿದ್ದಳು. ಆಕೆಯ ಮೃತದೇಹವನ್ನು ಇರಿಂಜಲಕುಡದಲ್ಲಿರುವ ಅಗ್ನಿಶಾಮಕ ಸಿಬ್ಬಂದಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಕಟ್ಟೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.
READ
- ಬಾಲಿವುಡ್ ಕಾಸ್ಟ್ ಕೌಚಿಂಗ್, ಸೀಕ್ರೆಟ್ ವಾಟ್ಸ್ಆ್ಯಪ್ ಗ್ರೂಪ್ ಕರಾಳತೆ ಬಿಚ್ಚಿಟ್ಟ ಸ್ಯಾಂಡಲ್ವುಡ್ ನಟಿ ಎರಿಕಾ ಫೆರ್ನಾಂಡೀಸ್
- 6 ವರ್ಷದ ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ : ಮಾಲೀಕನ ವಿರುದ್ಧ ಪ್ರಕರಣ ದಾಖಲು - PIT BULL DOG ATTACK ON BOY (VIDEO NEWS)
- ಐನ್ಸ್ಟೈನ್ ಮೆದುಳು ಕದ್ದು 240ಪೀಸ್ ಮಾಡಿ ಮೊಮ್ಮಗಳಿಗೆ ಉಡುಗೊರೆ ನೀಡಿದ ವೈದ್ಯ: ವಿಜ್ಞಾನಿಯ ರೋಚಕ ಕಥೆ ಇಲ್ಲಿದೆ
ಈ ಘಟನೆ ನಡೆದ ಸಂದರ್ಭ ಆಕೆಯ ಪಾಲಕರು ಮನೆಯಲ್ಲಿ ಇರಲಿಲ್ಲ. ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.