
ಮೂಡಿಗೆರೆ: ಆಟವಾಡುತ್ತಾ ದುರಂತ ಅಂತ್ಯ ಕಂಡ ಬಾಲಕಿ
Sunday, February 27, 2022
ಚಿಕ್ಕಮಗಳೂರು: ಆಡುವಾಡುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ದುರಂತವಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆಯೊಂದು ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಎಸ್ಟೇಟ್ನಲ್ಲಿ ನಡೆದಿದೆ.
ಗೀತಾ ಹಾಗೂ ಶೇಷಪ್ಪ ದಂಪತಿಯ ಪುತ್ರಿ ಪ್ರಾರ್ಥನಾ ಮೃತ ದುರ್ದೈವಿ ಬಾಲಕಿ.
ಪ್ರಾರ್ಥನಾ ಇಂದ್ರಾವತಿ ಎಸ್ಟೇಟ್ನಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭ ಆಕೆ ನೀರಿನ ಟ್ಯಾಂಕ್ಗೆ ಬಿದ್ದಿದ್ದಾಳೆ. ಆದರೆ ಯಾರಿಗೂ ಈ ವಿಚಾರ ತಿಳಿದಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಪ್ರಾರ್ಥನಾ ಎಲ್ಲೂ ಕಾಣುತ್ತಿಲ್ಲ ಎಂದು ಹುಡುಕಾಟ ನಡೆಸಿದಾಗ ನೀರಿನ ಟ್ಯಾಂಕ್ ಒಳಗೆ ಆಕೆಯ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.