-->
ಕನಸಲ್ಲಿ ಕಾಣಿಸಿಕೊಂಡ ತನಗೇಕೆ ಪೂಜೆ ಮಾಡಿಲ್ಲ ಎಂದ ದೇವರು: ಚೆನ್ನಕೇಶವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ

ಕನಸಲ್ಲಿ ಕಾಣಿಸಿಕೊಂಡ ತನಗೇಕೆ ಪೂಜೆ ಮಾಡಿಲ್ಲ ಎಂದ ದೇವರು: ಚೆನ್ನಕೇಶವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ

ಹಾಸನ: ರಾಜ್ಯದಲ್ಲಿ ಒಂದೆಡೆ ಕೋಮು ಸಂಘರ್ಷದಿಂದ ಹೊತ್ತಿ ಉರಿಯುತ್ತಿದ್ದರೆ, ಹಾಸನದಲ್ಲೊಂದು ಕೋಮುಸಾಮರಸ್ಯ ಬೆಸೆಯುವ ಘಟನೆಯೊಂದು ನಡೆದಿದೆ. ಕನಸಿನಲ್ಲಿ ಕಾಣಿಸಿಕೊಂಡ ದೇವರು ಸೂಚಿಸಿದನೆಂಬ ಕಾರಣಕ್ಕೆ ಮುಸ್ಲಿಂ ಕುಟುಂಬವೊಂದು ತಮ್ಮ ಜಮೀನಿನಲ್ಲಿ ಚೆನ್ನಕೇಶವನಿಗೆ ಪೂಜೆ ನೆರವೇರಿಸಿರುವ ಘಟನೆಯೊಂದು ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ. ನಡೆದಿದೆ. 

10 ವರ್ಷಗಳ ಹಿಂದೆ ಮುಸ್ಲಿಂ ಕುಟುಂಬವೊಂದು ಈ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿತ್ತು. ಆದರೆ, ಜಮೀನಿನಲ್ಲಿರುವ ಚೆನ್ನಕೇಶವ ದೇವರು ಕನಸಿನಲ್ಲಿ ಬಂದು ಪೂಜೆ ಮಾಡವಂತೆ ಸೂಚಿಸಿರುವ ಹಿನ್ನೆಲೆಯಲ್ಲೆ ಮುಸ್ಲಿಂ ಕುಟುಂಬ ಮತ್ತೆ ಜಮೀನಿಗೆ ಬಂದು ಪೂಜೆ ಸಲ್ಲಿಸಿದೆ. 

ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯ ದೀನ್ ದಯಾಳ್ ಬಡಾವಣೆಯಲ್ಲಿ ವಾಸವಿರುವ ಭಾಷಾಸಾಹೇಬ್ ಎಂಬವರ ಕುಟುಂಬ ಈ ರೀತಿ ಬಂದು ಚೆನ್ನಕೇಶವ ದೇವರಿಗೆ ಪೂಜೆ ನೆರವೇರಿಸಿದೆ. ಭಾಷಾಸಾಹೇಬ್ ಕುಟುಂಬವು ದಿ.ದೇವರಾಜ ಅರಸು ಸಿಎಂ ಆಗಿದ್ದ ಸಂದರ್ಭ ಉಳುವನೆ ಒಡೆಯ ನಿಯಮದಡಿ ಬೇಲೂರಿನಲ್ಲಿ ಭೂಮಿ ಪಡೆದು ತಮ್ಮ ಹೆಸರಿನಲ್ಲಿ ದಾಖಲೆ ಪಡೆದಿದ್ದರಂತೆ. 


ಇದೇ ಜಮೀನಿನಲ್ಲಿ ಜಂಟಿಯಾಗಿ ಬೆಳೆದಿದ್ದ ನೆರಳೆ ಹಾಗೂ ಆಲದ ಮರದ ಬಳಿ ಚೆನ್ನಕೇಶವ ದೇವಾಲಯಕ್ಕೆ ಸಂಬಂಧಿಸಿರುವ ಕಲ್ಲಿಗೆ ಭಾಷಾಸಾಹೇಬ್ ತಮ್ಮ ಬೆಳೆ ಕಟಾವಿನ ಸಮಯದಲ್ಲಿ ಪ್ರತಿವರ್ಷ ಪೂಜೆ ಸಲ್ಲಿಸುತ್ತಿದ್ದರಂತೆ. ಆದರೆ, ಕಳೆದ 8 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಗ್ರೂಪ್ ನಾಗಣ್ಣ ಎಂಬುವರಿಗೆ ಭಾಷಾಸಾಹೇಬ್ ತಮ್ಮ ಜಮೀನನ್ನು ಮಾರಿದ್ದರು. ಆದರೆ, ದೇವರಿರುವ ಜಾಗವನ್ನು ಮಾತ್ರ ಹಾಗೇ ಉಳಿಸಿಕೊಂಡಿದ್ದರು. ಆದರೆ ಆ ಬಳಿಕ ಪೂಜೆ ಮಾತ್ರ ಮಾಡುತ್ತಿರಲಿಲ್ಲ. 

ಆದರೆ ಇತ್ತೀಚೆಗೆ ಭಾಷಾಸಾಹೇಬ್ ಪುತ್ರ ರಿಯಾಜ್​ ಪಾಷಾ ಕನಸಿನಲ್ಲಿ ಚೆನ್ನಕೇಶವ ದೇವರು ಕಾಣಿಸಿಕೊಂಡಿದ್ದಾನೆಂತೆ. ಅಲ್ಲದೆ 'ತನಗೇಕೆ ಪೂಜೆ ಮಾಡುತ್ತಿಲ್ಲ' ಎಂದು ಕೇಳಿದ್ದಾನಂತೆ. ಇದರಿಂದ ಎಚ್ಚೆತ್ತ ಕುಟುಂಬವು ಇದೀಗ ಬೇಲೂರಿಗೆ ಆಗಮಿಸಿ ತಮ್ಮ ಜಮೀನು ಬಳಿಯಿರುವ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಅರ್ಚಕರ ಬಳಿ ಪೂಜೆ ಮಾಡಿಸಿದ್ದು, ಮುಂದೆ ಅವರೇ ಪೂಜಾ ಕೈಂಕರ್ಯ ಮಾಡಿಕೊಂಡು ಹೋಗುವುದಾಗಿ ಹೇಳಿದ್ದಾರೆ. 

ಇಲ್ಲಿ ಮುಖ್ಯವಾಗಿ ವೃಕ್ಷರಾಜನಿಗೆ ಪೂಜೆ ಮಾಡಲಾಗಿದೆ. ಈ ಜಮೀನು ಹಿಂದೆ ಭಾಷಾಸಾಹೇಬ್ ಕುಟುಂಬದ ಬಳಿ ಇತ್ತು. ಆ ಕುಟುಂಬ ಇಲ್ಲಿ ಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಈ ದೇಶದಲ್ಲಿದ್ದವರೆಲ್ಲ ಒಂದೆ. ಎಲ್ಲರಿಗೂ ದೇವರು ಒಬ್ಬನೆ. ಹೀಗಾಗಿ ಇಲ್ಲಿ ಭೇದ ಭಾವ ಇರದೆ ಒಟ್ಟಾಗಿ ಪೂಜೆ ನೆರವೇರಿಸಿದ್ದೇವೆ ಎಂದು ಅರ್ಚಕ ವೇದ ಬ್ರಹ್ಮ ಮಂಜುನಾಥ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article