ತಿಂಡಿ ತಿನ್ನಲೆಂದು ಬಂದ ಕಾನೂನು ವಿದ್ಯಾರ್ಥಿ ಹೋಟೆಲ್ ನಲ್ಲೇ ಹೃದಯಾಘಾತದಿಂದ ಮೃತ್ಯು
Monday, February 7, 2022
ಹುಣಸೂರು: ತಿಂಡಿ ತಿನ್ನಲೆಂದು ಹೋಟೆಲ್ ಗೆ ಬಂದಿದ್ದ ಎಲ್ಎಲ್ ಬಿ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ನಂಜಾಪುರ ಗ್ರಾಮ ನಿವಾಸಿ ನಟರಾಜ್ ಪುತ್ರ ನಿತಿನ್(25) ಮೃತಪಟ್ಟಿರುವ ದುರ್ದೈವಿ.
ನಿತಿನ್ ಸ್ನೇಹಿತನೊಂದಿಗೆ ತಿಂಡಿ ತಿನ್ನಲೆಂದು ಹುಣಸೂರಿನ ಹೋಟೆಲ್ ಗೆ ಬಂದಿದ್ದ. ಇಬ್ಬರೂ ತಿಂಡಿ ಆರ್ಡರ್ ಮಾಡಿದ್ದಾರೆ. ತಿಂಡಿ ಬರುವಷ್ಟರಲ್ಲೇ ನಿತಿನ್ ಕುಸಿದು ಬಿದ್ದಿದ್ದಾರೆ. ತಕ್ಷಣ ನಿತಿನ್ ನನ್ನು ಸ್ನೇಹಿತ ಹಾಗೂ ಹೋಟೆಲ್ ನವರು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುವಷ್ಟರಲ್ಲೇ ನಿತಿನ್ ಮೃತಪಟ್ಟಿದ್ದಾರೆ. ನಿತಿನ್ ಹೋಟೆಲ್ ನಲ್ಲಿದ್ದ ಕೊನೆ ಕ್ಷಣದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಪತ್ರೆಯಲ್ಲಿ ನಿತಿನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ನಿತಿನ್ ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ನಾಲ್ಕನೇ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿಯಾಗಿದ್ದರು. ಅವರ ಮೃತದೇಹವನ್ನು ಸ್ವಗ್ರಾಮ ನಂಜಾಪುರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದ್ದಾರೆ. ನಿತಿನ್ ತಂದೆ ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.