Career in Canara Bank- ಕೆನರಾ ಬ್ಯಾಂಕ್: ಚಿನ್ನಾಭರಣ ಮೌಲ್ಯಮಾಪಕರು ಬೇಕಾಗಿದ್ದಾರೆ
ಕೆನರಾ ಬ್ಯಾಂಕ್: ಚಿನ್ನಾಭರಣ ಮೌಲ್ಯಮಾಪಕರು ಬೇಕಾಗಿದ್ದಾರೆ
ಭಾರತ ಸರ್ಕಾರದ ಅಧೀನಕ್ಕೊಳಪಟ್ಟ ಪ್ರತಿಷ್ಠಿತ ಕೆನರಾ ಬ್ಯಾಂಕಿನ ವಿವಿಧ ಶಾಲೆಗಳಿಗೆ ಗುತ್ತಿಗೆ ಆಧಾರದ ಮೇಲೆ ಚಿನ್ನಾಭರಣಗಳ ಮೌಲ್ಯಮಾಪಕರು ಬೇಕಾಗಿದ್ದಾರೆ.
ಕೆನರಾ ಬ್ಯಾಂಕಿನ ಉಪ್ಪೂರು, ಕಲ್ಯಾಣಪುರ 1 & 2, ಕ್ಯಾಥಲಿಕ್ ಸೆಂಟರ್, ಮಣಿಪಾಲ, ಕೆಮ್ಮಣ್ಣು, ಮಲ್ಪೆ, ಪರ್ಕಳ, ಹಂಗಾರಕಟ್ಟೆ, ಕುಂಜಿಬೆಟ್ಟು, ಹೂಡೆ, ಮಧ್ವ ನಗರ, ಕೂರಾಡಿ, ಹನೇಹಳ್ಳಿ, ಏನ ಗುಡ್ಡೆ : ಈ ಶಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ಚಿನ್ನಾಭರಣಗಳ ಮೌಲ್ಯಮಾಪಕರು ಬೇಕಾಗಿದ್ದಾರೆ.
ವಿದ್ಯಾರ್ಹತೆ: ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು
ವಯೋಮಾನ: ವಯಸ್ಸು 30ರಿಂದ 57 ವರ್ಷ
ಉಡುಪಿ ಸುತ್ತಮುತ್ತಲಿನ ಅಥವಾ ಆಯಾ ಶಾಖಾ ಕಚೇರಿಯ ಪ್ರದೇಶಕ್ಕೆ ಸಂಬಂಧಪಟ್ಟವರಿಗೆ ಆದ್ಯತೆ ನೀಡಲಾಗುವುದು.
ಚಿನ್ನಾಭರಣಗಳ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿ ಕನಿಷ್ಟ ಐದು ವರ್ಷಗಳ ಪ್ರಾಯೋಗಿಕ ಅನುಭವ ಇದ್ದವರಿಗೆ ಹೆಚ್ಚಿನ ಆದ್ಯತೆ.
ವಿವರಗಳಿಗಾಗಿ ಮತ್ತು ಅರ್ಜಿ ಪ್ರತಿಗಳಿಗೆ ಸಮೀಪದ ಕೆನರಾ ಬ್ಯಾಂಕಿನ ಶಾಖೆಯನ್ನು ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 11 2022