RBI Recruitment 2022 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 950 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
RBI Recruitment 2022 : 950 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 950 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು RBIನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ನೋಡಬಹುದು.
ಭಾರತದ ವಿವಿಧೆಡೆಯಲ್ಲಿ ಇರುವ ಆರ್‌ಬಿಐನ ಶಾಖೆಗಳಲ್ಲಿ ಪೂರ್ಣಕಾಲಿಕ ನೆಲೆಯಲ್ಲಿ ಕೆಲಸ ಮಾಡಲು ಸಿದ್ಧರಾಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಅರ್ಜಿ ಸಲ್ಲಿಸಲು ಆರಂಭದ ದಿನ : ಫೆಬ್ರವರಿ 17,2022
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ: ಮಾರ್ಚ್ 8,2022
ಶೈಕ್ಷಣಿಕ ವಿದ್ಯಾರ್ಹತೆ :
ಸಹಾಯಕ ಹುದ್ದೆ: ಯಾವುದೇ ವಿಷಯದಲ್ಲಿ ಪದವಿ (ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ ವಿಶ್ವವಿದ್ಯಾಲಯದಿಂದ) ಪಡೆದಿರಬೇಕು
ಜೊತೆಗೆ ಅಭ್ಯರ್ಥಿಗಳು ಆಯ್ಕೆ ಬಯಸುವ ಪ್ರದೇಶದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು, ಅರ್ಥಮಾಡಿಕೊಳ್ಳಲು ಮತ್ತು ಮಾತನಾಡಲು ತಿಳಿದಿರಬೇಕು.
ವಯೋಮಿತಿ :
RBI ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಯೋಮಿತಿ ನಿಗದಿಪಡಿಸಲಾಗಿದ್ದು, ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನದ ವಿವರ : ಮಾಸಿಕ ರೂ. 14,650/- ರಿಂದ 34,990/- ವೇತನ ಜೊತೆಗೆ ಇತರೆ ಭತ್ಯೆಗಳು.
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ / ಪ್ರಿಲಿಮಿನರಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.
ಪ್ರಿಲಿಮಿನರಿ ಪರೀಕ್ಷೆ ಮಾರ್ಚ್ 26 ಮತ್ತು 27, 2022ರಂದು ನಡೆಯಲಿದೆ.
ಅರ್ಜಿ ಶುಲ್ಕ : ಅರ್ಜಿ ಶುಲ್ಕದ ವಿವರವನ್ನು ನೇಮಕಾತಿ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ : ಅಧಿಕೃತ ವೆಬ್‌ಸೈಟ್ https://www.rbi.org.in/ ಗೆ ಭೇಟಿ ನೀಡಿ. ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಕುರಿತ ಅಧಿಸೂಚನೆ ಓದಲು ಇಲ್ಲಿದೆ ಕೊಂಡಿ...