
ತಮ್ಮ ಫೋಟೋ ಎಡಿಟ್ ಮಾಡಿ ತಿರುಚಿ ವೈರಲ್ ಮಾಡುವವರ ವಿರುದ್ಧ ಗರಂ ಆದ ನಟಿ ಮಾಳವಿಕಾ ಮೋಹನನ್
Thursday, February 3, 2022
ಚೆನ್ನೈ: ಮಲಯಾಳಂ ಬೆಡಗಿ ಮಾಳವಿಕಾ ಮೋಹನನ್ ತಮ್ಮ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಬಿಕಿನಿ ಫೋಟೋಗಳನ್ನು ಸಾಮಾಜಿಕ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇದೀಗ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿರುವ ಮಾಳವಿಕಾ, ಕೆಟ್ಟದಾಗಿ ಎಡಿಟ್ ಮಾಡಿ ಹರಿಯಬಿಡುವವರ ವಿರುದ್ಧ ಹರಿಹಾಯ್ದಿದ್ದಾರೆ.
ಇತ್ತೀಚಿಗೆ ಮಾಳವಿಕಾ ಮಾಲ್ಡೀವ್ಸ್ ಪ್ರವಾಸದಲ್ಲಿದ್ದ ತಮ್ಮ ಒಂದು ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಕೆಲ ತಿಂಗಳ ಹಿಂದೆ ತೆಗೆದ ನನ್ನ ಈ ಫೋಟೊವನ್ನು ಕೆಲವರು ಕೆಟ್ಟದಾಗಿ ಎಡಿಟ್ ತಿರುಚಿದ್ದಾರೆ. ಅದನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಅಲ್ಲದೆ, ಕೆಲ ಮಾಧ್ಯಮದಲ್ಲೂ ಈ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದು ಕಳಪೆ ಪತ್ರಿಕೋದ್ಯಮದ ಲಕ್ಷಣವಾಗಿದೆ. ನಕಲಿ ಫೋಟೋಗಳನ್ನು ನೋಡಿದ್ದಲ್ಲಿ ರಿಪೋರ್ಟ್ ಮಾಡಿ ಸಹಾಯ ಮಾಡಿ ಎಂದು ಮಾಳವಿಕಾ ಮೋಹನನ್ ಕೇಳಿಕೊಂಡಿದ್ದಾರೆ.
ಈ ರೀತಿಯಲ್ಲಿ ಫೋಟೋಗಳನ್ನು ತಿರುಚಿ ವೈರಲ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಅನೇಕ ನಟಿಯರು ಈ ರೀತಿಯಲ್ಲಿ ಸಂತ್ರಸ್ತೆಯರಾಗಿದ್ದಾರೆ. ಆದರೆ, ಕೆಲವೇ ಮಂದಿ ನಟಿಯರು ಮಾತ್ರ ಈ ಬಗ್ಗೆ ಧ್ವನಿ ಎತ್ತಿದರೆ, ಇನ್ನು ಕೆಲವು ಅದನ್ನು ನಿರ್ಲಕ್ಷಿಸಿ ತಮ್ಮ ಕೆಲಸದತ್ತ ಗಮನ ಹರಿಸುತ್ತಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಾಳವಿಕಾ ಮೋಹನನ್ ದಕ್ಷಿಣ ಭಾರತ ಸಿನಿಮಾಗಳಲ್ಲಿ ದಿನೇ ದಿನೆ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಟ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಮೂಲಕ ಮಾಳವಿಕ ಒಳ್ಳೆಯ ಹೆಸರು ಗಳಿಸಿದ್ದಾರೆ.