
ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಾಗರಹಾವು: ದೃಶ್ಯ ಕಂಡು ಪುಳಕಿತರಾದ ಭಕ್ತರು
Thursday, February 3, 2022
ಬುಂದೇಲ್ಖಂಡ (ಮಧ್ಯಪ್ರದೇಶ): ವಿಜ್ಞಾನ, ತಂತ್ರಜ್ಞಾನ, ವೈದ್ಯ ವಿಜ್ಞಾನ ಯಾವ ತರ್ಕಕ್ಕೂ ಊಹೆಗೂ ನಿಲುಕದಂತಹ ಕೆಲವೊಂದು ಘಟನೆಗಳು ನಡೆಯುತ್ತಿರುತ್ತವೆ. ಇದನ್ನು ಪವಾಡ ಎನ್ನಬಹುದೇನೋ. ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅಂಥಹದ್ದೇ ಯಾರ ಊಹೆಗೂ ನಿಲುಕದ ಘಟನೆಯೊಂದು ಮಧ್ಯಪ್ರದೇಶದ ಜಟಾಶಂಕರ ಧಾಮದಲ್ಲಿ ನಡೆದಿದೆ.
ಜಟಾಶಂಕರ ಧಾಮದ ಬುಂದೇಲ್ಖಂಡದ ಕೇದಾರನಾಥದಲ್ಲಿರುವ ಶಿವಧಾಮದಲ್ಲಿ ಈ ಪವಾಡವು ನಡೆದಿದೆ. ಸದಾ ಪವಾಡಗಳಿಗೆ ಖ್ಯಾತಿ ಹೊಂದಿರುವ ಶಿವಧಾಮದಲ್ಲಿ ಮೊನ್ನೆ ರಾತ್ರಿ ದೇವಸ್ಥಾನಕ್ಕೆ ಆಗಮಿಸಿರುವ ಹಾವೊಂದು ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದೆ. ಈ ಸಂಪೂರ್ಣ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಶಿವಲಿಂಗದ ಸುತ್ತಲೂ ಹಾವು ಅನೇಕ ಸಲ ಪ್ರದಕ್ಷಿಣೆ ಹಾಕಿದೆ. ಈ ದೃಶ್ಯವನ್ನು ಕಂಡು ಭಕ್ತರು ಪುನೀತರಾಗಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ಕುರಿತು ಟ್ರಸ್ಟ್ನ ಅಧೀಕ್ಷಕ ಜೆ.ಪಿ ಖರೆ ಮಾತನಾಡಿದ್ದು, ಈ ವಿಚಾರ ಹೊಸದನೇಲ್ಲ. ಈ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯುವ ದಿನ ಈ ಸರ್ಪ ಇಲ್ಲಿಗೆ ಬರುತ್ತದೆ. ಇಲ್ಲಿಯವರೆಗೂ ಯಾರಿಗೂ ಕೂಡ ಅಪಾಯವನ್ನೂ ಮಾಡಿಲ್ಲ. ನಿನ್ನೆ ರಾತ್ರಿ ಕೂಡ ಬಂದಿದೆಯಷ್ಟೇ ಎಂದಿದ್ದಾರೆ.